ಮುಖ್ಯ ವಿಷಯಕ್ಕೆ ಹೋಗಿ
The Karnataka Today
17 Oct
ಸುದ್ದಿ
ಭಾರತ

ಮಣಿಪುರದ ಕಾಮ್ಜಾಂಗ್ ಜಿಲ್ಲೆಯ ಚಾಸಾದ್ ಗ್ರಾಮದಲ್ಲಿ ಉಗ್ರರ ಗುಂಡಿನ ದಾಳಿ: ಓರ್ವ ಸಾವು

ಮಣಿಪುರದಲ್ಲಿ ಹಿಂಸಾಚಾರದ ಘಟನೆಗಳು ಮತ್ತೊಮ್ಮೆ ಕಳವಳವನ್ನು ಹೆಚ್ಚಿಸುತ್ತಿವೆ. ಶನಿವಾರ ಮಧ್ಯಾಹ್ನ ರಾಜ್ಯದ ಕಾಮ್ಜಾಂಗ್ ಜಿಲ್ಲೆಯ ಚಾಸಾದ್ ಗ್ರಾಮದಲ್ಲಿ ಶಂಕಿತ ಉಗ್ರರು ಗುಂಡು ಹಾರಿಸಿದ್ದಾರೆ. ದಾಳಿಯಲ್ಲಿ ಓರ್ವ ಸಾವನ್ನಪ...

ಮಣಿಪುರದಲ್ಲಿ ಹಿಂಸಾಚಾರ: ಕುಕಿ ಗ್ರಾಮದಲ್ಲಿ ಶಂಕಿತ ಉಗ್ರರಿಂದ ಗುಂಡಿನ ಹಾಳಿ; ಓರ್ವ ಸಾವು, ನಾಲ್ವರಿಗೆ ಗಾಯ!
ಹಂಚಿಕೊಳ್ಳಿ:

ಮಣಿಪುರದ ಕಾಮ್ಜಾಂಗ್ ಜಿಲ್ಲೆಯ ಚಾಸಾದ್ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಶಂಕಿತ ಉಗ್ರರು ಅನಿರೀಕ್ಷಿತವಾಗಿ ಗುಂಡಿನ ದಾಳಿ ನಡೆಸಿದ್ದಾರೆ. ಈ ಕೃತ್ಯದಿಂದಾಗಿ ಗ್ರಾಮದ ಮುಖ್ಯಸ್ಥ ತಂಗ್ಜಹೌ ಹಾವೊಕಿಪ್ ಸೇರಿದಂತೆ ಐವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೀಖೋಹೌ ಎಂಬುವವರು ಮೃತಪಟ್ಟಿದ್ದಾರೆ. ದಾಳಿಯ ನಂತರ ಸ್ಥಳೀಯ ಸಶಸ್ತ್ರ ಗುಂಪುಗಳು ಮತ್ತು ಶಂಕಿತ ಉಗ್ರರ ನಡುವೆ ಸಂಜೆಯವರೆಗೆ ತೀವ್ರ ಗುಂಡಿನ ಚಕಮಕಿ ನಡೆದಿದೆ. ಈ ಘಟನೆಯು ಪ್ರದೇಶದಲ್ಲಿ ಭದ್ರತೆಯ ಕುರಿತು ಆತಂಕ ಮೂಡಿಸಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಹಂಚಿಕೊಳ್ಳಿ: