ನಾಗಪಟ್ಟಣಂನಲ್ಲಿ ಮಾದಕ ವಸ್ತು ಪತ್ತೆ: ಟಿವಿಕೆ ವಿರುದ್ಧ ಎಂ.ಕೆ. ಸ್ಟಾಲಿನ್ ತೀವ್ರ ವಾಗ್ದಾಳಿ
ಚೆನ್ನೈ: ಭಾರೀ ಪ್ರಮಾಣದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡ ಪ್ರಕರಣ ಸಂಬಂಧ ಟಿವಿಕೆ ಸ್ಥಳೀಯ ಪದಾಧಿಕಾರಿಯೊಬ್ಬರನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಇದೇ ವಿಚಾರವಾಗಿ ಮಾಜಿ ಸಿಎಂ, ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವ...

ನಾಗಪಟ್ಟಣಂ ಜಿಲ್ಲೆಯ ಟಿವಿಕೆ ಪದಾಧಿಕಾರಿ ಭೂಪಾಲನ್ನನ್ನು ಡಿಆರ್ಐ ಅಧಿಕಾರಿಗಳು ಬಂಧಿಸಿದ್ದಾರೆ. ಈತನ ಬಳಿ 135 ಕೆಜಿ ಮೆಥಾಂಫೆಟಮೈನ್ ಪತ್ತೆಯಾದ ಹಿನ್ನೆಲೆಯಲ್ಲಿ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಟಿವಿಕೆಯನ್ನು ಬ್ರೇಕಿಂಗ್ ಬ್ಯಾಡ್ ಪಾರ್ಟಿ ಎಂದು ಟೀಕಿಸಿದ್ದಾರೆ. ಪಕ್ಷದ ಸದಸ್ಯರು ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದು, ಮುಖ್ಯಮಂತ್ರಿ ವಿಜಯ್ ಅವರು ಸಾರ್ವಜನಿಕವಾಗಿ ಮಾದಕ ವಸ್ತುಗಳ ಬಗ್ಗೆ ಭಾಷಣ ಮಾಡುವುದನ್ನು ನಿಲ್ಲಿಸಬೇಕೆಂದು ಸ್ಟಾಲಿನ್ ಆಗ್ರಹಿಸಿದ್ದಾರೆ. ಈ ಪ್ರಕರಣದ ಹಿಂದೆ ಇರುವ ಸಂಪೂರ್ಣ ಜಾಲವನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.




