ಮುಖ್ಯ ವಿಷಯಕ್ಕೆ ಹೋಗಿ
The Karnataka Today
14 Oct
ಅಪರಾಧ

ಉಡುಪಿ: ಕಳವು ಪ್ರಕರಣ

ಪಿರ್ಯಾದುದಾರರು ಸಿದ್ದಪ್ಪ ಯಲ್ಲಪ್ಪ ಉಪ್ಪಾರ (32) ಗ್ರಾಮ ಮತ್ತು ಅಂಚೆ, ರಟ್ಟಿಹಳ್ಳಿ ತಾಲೂಕು, ಹಾವೇರಿ ರವರು KA68J3675 ನೇ ಹೀರೋ ಸ್ಲೈಂಡರ್ ಪ್ಲಸ್ ಮೋಟಾರ್ ಸೈಕಲ್ ನ ಆರ್.ಸಿ ಮಾಲಕನಾಗಿದ್ದು, ದಿನಾಂಕ 08/10/202...

· ಉಡುಪಿ
ಕಳವು ಪ್ರಕರಣ — ಜಿಲ್ಲಾ ಪೊಲೀಸ್ ವರದಿ
ಹಂಚಿಕೊಳ್ಳಿ:

ಪಿರ್ಯಾದುದಾರರು ಸಿದ್ದಪ್ಪ ಯಲ್ಲಪ್ಪ ಉಪ್ಪಾರ (32) ಗ್ರಾಮ ಮತ್ತು ಅಂಚೆ, ರಟ್ಟಿಹಳ್ಳಿ ತಾಲೂಕು, ಹಾವೇರಿ ರವರು KA68J3675 ನೇ ಹೀರೋ ಸ್ಲೈಂಡರ್ ಪ್ಲಸ್ ಮೋಟಾರ್ ಸೈಕಲ್ ನ ಆರ್.ಸಿ ಮಾಲಕನಾಗಿದ್ದು, ದಿನಾಂಕ 08/10/2026 ರಂದು ಸಂಜೆ 5:30 ಗಂಟೆಗೆ ನನ್ನ ಬಾಬ್ತು ಮೋಟಾರ್ ಸೈಕಲ್ ನ್ನು ಉಡುಪಿ ಸರ್ವೀಸ್ ಬಸ್ ನಿಲ್ದಾಣದ ಬದಿಯಲ್ಲಿ ನಂದಿನಿ ಮಿಲ್ಕ್ ಪಾರ್ಲರ್ ಹತ್ತಿರ ಪಾರ್ಕ್ ಮಾಡಿ ಮಂಗಳೂರಿಗೆ ಹೋಗಿದ್ದು, ದಿನಾಂಕ 09/10/2026 ರಂದು ಬೆಳಿಗ್ಗೆ 09:00 ಗಂಟೆಗೆ ಸ್ಥಳಕ್ಕೆ ಬಂದು ನೋಡಲಾಗಿ ಪಿರ್ಯಾದುದಾರರ ಮೋಟಾರ್ ಸೈಕಲ್ ಇಟ್ಟ ಸ್ಥಳದಲ್ಲಿ ಇರುವುದಿಲ್ಲ. ಪಿರ್ಯಾದುದಾರರು ಮೋಟಾರ್ ಸೈಕಲ್ ನನ್ನು ಉಡುಪಿ ಬಸ್ ನಿಲ್ದಾಣದ ಪರಿಸರದಲ್ಲಿ ಎಲ್ಲಾ ಕಡೆ ಹುಡುಕಾಡಿದ್ದು. ಆದರೆ ಮೋಟಾರ್ ಸೈಕಲ್ ಈವರೆಗೆ ಪತ್ತೆಯಾಗಿರುವುದಿಲ್ಲ . ದಿನಾಂಕ 08/10/2026 ರಂದು ಸಂಜೆ 5:30 ಗಂಟೆಯಿಂದ ದಿನಾಂಕ 09/10/2026 ರಂದು ಬೆಳಿಗ್ಗೆ 09:00 ಗಂಟೆ ನಡುವಿನ ಸಮಯದಲ್ಲಿ ಯಾರೋ ಕಳ್ಳರು ನನ್ನ ಮೋಟಾರ್ ಸೈಕಲ್ ನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಮೋಟಾರ್ ಸೈಕಲ್ ನ ಅಂದಾಜು ಮೌಲ್ಯ ರೂ. 20,000/- ಆಗಬಹುದು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 140/2026 U/S 303(2) BNS ಯಂತೆ ಪ್ರಕರಣ ದಾಖಲಾಗಿರುತ್ತದೆ.

ಉಡುಪಿ ನಗರ ಪೊಲೀಸ್ ಠಾಣೆ — ಅಪರಾಧ ಕ್ರಮಾಂಕ 140/2026

ಹಂಚಿಕೊಳ್ಳಿ: