ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಅಪರಾಧ

ಸೂರತ್: ಮೊಬೈಲ್ ಒಡೆದ ತಂದೆಯನ್ನು ಕತ್ತಿಯಿಂದ ಇರಿದು ಕೊಂದ 22 ವರ್ಷದ ಮಗಳು

ತಂದೆಯೊಬ್ಬರು ಮಗಳ ಮೊಬೈಲ್ ಫೋನ್ ಅನ್ನು ನೆಲಕ್ಕೆ ಎಸೆದು ಒಡೆದು ಹಾಕಿದ್ದಕ್ಕೆ ಆಕ್ರೋಶಗೊಂಡ ಮಗಳು, ಕುಕ್ಕರ್ ಮುಚ್ಚಳದಿಂದ ಹಲ್ಲೆ ನಡೆಸಿ ಹಾಗೂ ಕತ್ತಿಯಿಂದ ಇರಿದು ಸ್ವಂತ ತಂದೆಯನ್ನೇ ಭೀಕರವಾಗಿ ಹತ್ಯೆ ಮಾಡಿರುವ ಆಘಾತಕಾ...

ಮೊಬೈಲ್ ಎಸೆದು ಒಡೆದ ಅಪ್ಪನಿಗೆ  ಕುಕ್ಕರ್ ಮುಚ್ಚಳದಿಂದ ಹೊಡೆದು, ಕತ್ತಿಯಿಂದ ಇರಿದು ಕೊಂದ ಮಗಳು!
ಹಂಚಿಕೊಳ್ಳಿ:

ಗುಜರಾತ್‌ನ ಸೂರತ್ ನಗರದ ಕೊಸಾದ್ ಆವಾಸ್ ಪ್ರದೇಶದಲ್ಲಿ ತಂದೆ ಮತ್ತು ಮಗಳ ನಡುವಿನ ಜಗಳ ವಿಕೋಪಕ್ಕೆ ಹೋಗಿ ಹತ್ಯೆಯಲ್ಲಿ ಅಂತ್ಯವಾಗಿದೆ. 22 ವರ್ಷದ ಕಾಜಲ್ ಎಂಬಾಕೆ ತನ್ನ ತಂದೆ ರಮೇಶ್ ಸಿಂಗ್ ಕೈಲಾಶ್ ಸಿಂಗ್ ರಜಪೂತ್ ಅವರ ಮೊಬೈಲ್ ಫೋನ್ ಒಡೆದಿದ್ದಕ್ಕೆ ಸಿಟ್ಟಾಗಿ ಈ ಕೃತ್ಯ ಎಸಗಿದ್ದಾಳೆ. ಕುಕ್ಕರ್ ಮುಚ್ಚಳದಿಂದ ತಲೆಗೆ ಹೊಡೆದು ನಂತರ ಕತ್ತಿಯಿಂದ ಹೊಟ್ಟೆಗೆ ಇರಿದಿದ್ದರಿಂದ ರಮೇಶ್ ಸಿಂಗ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯ ಸಮಯದಲ್ಲಿ ಮನೆಯಲ್ಲಿದ್ದ ಇತರ ಸದಸ್ಯರ ಸಮ್ಮುಖದಲ್ಲೇ ಈ ಹಲ್ಲೆ ನಡೆದಿದೆ. ಅಮ್ರೋಲಿ ಪೊಲೀಸ್ ಠಾಣೆಯ ಅಧಿಕಾರಿಗಳು ಆರೋಪಿ ಮಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

ಹಂಚಿಕೊಳ್ಳಿ: