ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಅಪರಾಧ

ವಿಟ್ಲ: ಪಟಾಕಿ ಅಂಗಡಿ ಬಳಿ ನಿಲ್ಲಿಸಿದ್ದ ಬೈಕ್‌ಗೆ ಬೆಂಕಿ, 90 ಸಾವಿರ ರೂ. ನಷ್ಟ

ವಿಟ್ಲ ಕಸಬಾ ಗ್ರಾಮದ ಬಾಕಿಮಾರು ಗದ್ದೆಯಲ್ಲಿರುವ ಪಟಾಕಿ ಅಂಗಡಿಯ ಬಳಿ ನಿಲ್ಲಿಸಿದ್ದ ತನ್ನ ಮೋಟಾರು ಸೈಕಲ್‌ಗೆ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ ಎಂದು ಮನೋಹರ ಎಂಬುವವರು ದೂರು ನೀಡಿದ್ದಾರೆ. ...

· ದಕ್ಷಿಣ ಕನ್ನಡ
ಪೊಲೀಸ್ ವಾಹನ
ಹಂಚಿಕೊಳ್ಳಿ:

ವಿಟ್ಲ ಕಸಬಾ ಗ್ರಾಮದ ಬಾಕಿಮಾರು ಗದ್ದೆಯಲ್ಲಿರುವ ಪಟಾಕಿ ಅಂಗಡಿಯ ಬಳಿ ನಿಲ್ಲಿಸಿದ್ದ ತನ್ನ ಮೋಟಾರು ಸೈಕಲ್‌ಗೆ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ ಎಂದು ಮನೋಹರ ಎಂಬುವವರು ದೂರು ನೀಡಿದ್ದಾರೆ.

ದೂರಿನ ಪ್ರಕಾರ, ಮನೋಹರ ಅವರು ಬಾಲಕೃಷ್ಣ ಪಾಟಾಳಿ ಎಂಬುವವರ ಪಟಾಕಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ನವೆಂಬರ್ 11ರ ಮಧ್ಯರಾತ್ರಿ 12-00 ಗಂಟೆಗೆ ಕೆಲಸ ಮುಗಿಸಿ ತನ್ನ ಕೆಎ-21-ಇಡಿ-8433 ನಂಬರಿನ ಮೋಟಾರು ಸೈಕಲ್ ಅನ್ನು ತಾತ್ಕಾಲಿಕ ಶೆಡ್‌ನ ಹಿಂಭಾಗದಲ್ಲಿ ನಿಲ್ಲಿಸಿ ಹೋಗಿದ್ದರು.

ನವೆಂಬರ್ 12ರ ಬೆಳಿಗ್ಗೆ 9-00 ಗಂಟೆಗೆ ಬೈಕ್ ತೆಗೆದುಕೊಳ್ಳಲು ಬಂದಾಗ, ದುಷ್ಕರ್ಮಿಗಳು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದರಿಂದ ಬೈಕ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕೃತ್ಯದಿಂದ ತಮಗೆ ಸುಮಾರು 90,000 ರೂಪಾಯಿ ನಷ್ಟವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಕ್ರ 234/2026 ಕಲಂ 326(f) ಬಿಎನ್‌ಎಸ್ 2023 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ತನಿಖೆಯ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

ನಷ್ಟವುಂಟು ಮಾಡಿದ ಬಗ್ಗೆ ವಿಟ್ಲ ಪೊಲೀಸ್ ಠಾಣೆ

ಹಂಚಿಕೊಳ್ಳಿ: