ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಅಪರಾಧ

ಧರ್ಮಸ್ಥಳ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಯಾರ್ಡ್‌ನಿಂದ 2.41 ಲಕ್ಷ ರೂ. ಮೌಲ್ಯದ ವಸ್ತುಗಳ ಕಳವು

ಧರ್ಮಸ್ಥಳದ ಕಲ್ಮಂಜದ ನಿಡಿಗಲ್ ಯಾರ್ಡ್‌ನಿಂದ ಸುಮಾರು 2,41,500 ರೂಪಾಯಿ ಮೌಲ್ಯದ ವಿದ್ಯುತ್ ಸಾಮಗ್ರಿಗಳನ್ನು ಕಳವು ಮಾಡಲಾಗಿದೆ ಎಂದು ರಂಜನ್ ಎಂಬುವವರು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಪ್ರಕ...

· ದಕ್ಷಿಣ ಕನ್ನಡ
ಪೊಲೀಸ್ ಸಿಬ್ಬಂದಿ
ಹಂಚಿಕೊಳ್ಳಿ:

ಧರ್ಮಸ್ಥಳದ ಕಲ್ಮಂಜದ ನಿಡಿಗಲ್ ಯಾರ್ಡ್‌ನಿಂದ ಸುಮಾರು 2,41,500 ರೂಪಾಯಿ ಮೌಲ್ಯದ ವಿದ್ಯುತ್ ಸಾಮಗ್ರಿಗಳನ್ನು ಕಳವು ಮಾಡಲಾಗಿದೆ ಎಂದು ರಂಜನ್ ಎಂಬುವವರು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರಿನ ಪ್ರಕಾರ, ರಂಜನ್ ಅವರು ಮೊಗ್ರೋಡಿ ಕಂಪೆನಿಯಲ್ಲಿ ನಿಡಿಗಲ್ ಯಾರ್ಡ್ ಇನ್‌ಚಾರ್ಜ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಬಾಡಿಗೆ ಪಡೆದ ಜಾಗದಲ್ಲಿ 33 ಕೆವಿ ವಿದ್ಯುತ್ ಮಾರ್ಗ ಸ್ಥಳಾಂತರದ ವೇಳೆ ತೆಗೆದ ವಿದ್ಯುತ್ ವಾಹಕ ಮತ್ತು ಕಬ್ಬಿಣದ ಸಾಮಗ್ರಿಗಳನ್ನು ಅಲ್ಲಿ ಶೇಖರಿಸಿಡಲಾಗಿತ್ತು.

ದಿನಾಂಕ 09.11.2026 ರಂದು ಕೆಲಸದ ಪಾಳಿ ಮುಗಿಸುವಾಗ ಸಾಮಗ್ರಿಗಳು ಯಾರ್ಡ್‌ನಲ್ಲಿ ಇದ್ದವು. ಮರುದಿನ ಕಂಪೆನಿಗೆ ರಜೆ ಇದ್ದ ಕಾರಣ, 11.11.2026 ರಂದು ಬೆಳಿಗ್ಗೆ 8.00 ಗಂಟೆಗೆ ಕೆಲಸಕ್ಕೆ ಬಂದಾಗ ಯಾರ್ಡ್‌ನಲ್ಲಿದ್ದ ಸಾಮಗ್ರಿಗಳು ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ದಿನಾಂಕ 10.11.2026 ರ ಮುಂಜಾನೆ ಸುಮಾರು 3.00 ಗಂಟೆ ಸಮಯದಲ್ಲಿ ಪಿಕಪ್ ವಾಹನದಲ್ಲಿ ಬಂದ ಮೂವರು ಅಪರಿಚಿತರು ಸಾಮಗ್ರಿಗಳನ್ನು ಕಳ್ಳತನ ಮಾಡಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 82/2026, ಕಲಂ 303(2) ಬಿಎನ್‌ಎಸ್-2023 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ತನಿಖೆಯ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

ಧರ್ಮಸ್ಥಳ ಪೊಲೀಸ್ ಠಾಣೆ — ಅಪರಾಧ ಕ್ರಮಾಂಕ 82/2026

ಹಂಚಿಕೊಳ್ಳಿ: