ಮುಖ್ಯ ವಿಷಯಕ್ಕೆ ಹೋಗಿ
The Karnataka Today
15 Oct
ಸುದ್ದಿ
ಅಪರಾಧ

ಪುತ್ತೂರು ನಗರ: ಇತರೆ ಪ್ರಕರಣ

ದಿನಾಂಕ;- 14-10-2026 ರಂದು ಸಂಜೆ ವೇಳೆ, ಪುತ್ತೂರು ಕಸಬ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಅಂಗಡಿಯೊಂದರಲ್ಲಿ ಅಕ್ರಮವಾಗಿ ನಿಷೇಧಿತ ಕೇರಳ ರಾಜ್ಯದ ಲಾಟರಿ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ, ವಾಸು ನಾ...

· ದಕ್ಷಿಣ ಕನ್ನಡ
ಪೊಲೀಸ್ ವಾಹನ
ಹಂಚಿಕೊಳ್ಳಿ:

ದಿನಾಂಕ;- 14-10-2026 ರಂದು ಸಂಜೆ ವೇಳೆ, ಪುತ್ತೂರು ಕಸಬ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಅಂಗಡಿಯೊಂದರಲ್ಲಿ ಅಕ್ರಮವಾಗಿ ನಿಷೇಧಿತ ಕೇರಳ ರಾಜ್ಯದ ಲಾಟರಿ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ, ವಾಸು ನಾಯ್ಕ್, ಸಹಾಯಕ ಪೊಲೀಸ್ ಉಪ ನಿರೀಕ್ಷಕರು, ಪುತ್ತೂರು ನಗರ ಠಾಣೆರವರು ಸಿಬ್ಬಂದಿಗಳೊಂದಿಗೆ ಸದ್ರಿ ಸ್ಥಳಕ್ಕೆ ತೆರಳಿ ಅಂಗಡಿ ಮಾಲಿಕರಾದ ಪುತ್ತೂರು ಕಸಬಾ ನಿವಾಸಿ ಶ್ರೀನಿವಾಸ ಪೈ (33) ಎಂಬವರನ್ನು ಸದ್ರಿಯವರು ಕೇರಳ ರಾಜ್ಯದ ಲಾಟರಿಯನ್ನು ತಂದು ಅಕ್ರಮವಾಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದು, ಮಾರಾಟಕ್ಕಾಗಿ ತಂದಿದ್ದ ಲಾಟರಿ ಟಿಕೇಟ್ ಗಳನ್ನು ತೆಗೆದು ಹಾಜರುಪಡಿಸಿರುತ್ತಾರೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 124/2026, ಕಲಂ:7(iii) ಲಾಟರಿ ನಿಷೇಧ ಕಾಯ್ದೆ 1998 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಪುತ್ತೂರು ನಗರ ಪೊಲೀಸ್ ಠಾಣೆ

ಹಂಚಿಕೊಳ್ಳಿ: