ಮುಖ್ಯ ವಿಷಯಕ್ಕೆ ಹೋಗಿ
The Karnataka Today
14 Oct
ಅಪರಾಧ

ಪಡುಬಿದ್ರಿ: ಅಪಘಾತ ಪ್ರಕರಣ

ಪಿರ್ಯಾದಿದಾರರಾದ ನಾಗೇಂದ್ರ ಬಿ ಎಸ್ (49) 126 ಡಿ ಬ್ಲಾಕ್ 5 ನೇ ಕ್ರಾಸ್ ಎಸ್ ಬಿ ಎಂ ಲೇ ಹೌಟ್, ಬೋಗಾದಿ ಮೈಸೂರು ಇವರು ತನ್ನ ಕಾರು KA-09 ML-3290 ನೇ ದರಲ್ಲಿ ಕುಟುಂಬದೊಂದಿಗೆ ಪ್ರವಾಸಕ್ಕೆಂದು ಬಂದಿದ್ದು ದಿನಾಂಕ...

· ಉಡುಪಿ
ಅಪಘಾತ ಪ್ರಕರಣ — ಜಿಲ್ಲಾ ಪೊಲೀಸ್ ವರದಿ
ಹಂಚಿಕೊಳ್ಳಿ:

ಪಿರ್ಯಾದಿದಾರರಾದ ನಾಗೇಂದ್ರ ಬಿ ಎಸ್ (49) 126 ಡಿ ಬ್ಲಾಕ್ 5 ನೇ ಕ್ರಾಸ್ ಎಸ್ ಬಿ ಎಂ ಲೇ ಹೌಟ್, ಬೋಗಾದಿ ಮೈಸೂರು ಇವರು ತನ್ನ ಕಾರು KA-09 ML-3290 ನೇ ದರಲ್ಲಿ ಕುಟುಂಬದೊಂದಿಗೆ ಪ್ರವಾಸಕ್ಕೆಂದು ಬಂದಿದ್ದು ದಿನಾಂಕ 13/10/2026 ರಂದು ಬೇಕಲ್ನಿಂದ ಹೊನ್ನಾವರ ಕಡೆಗೆ ಹೊರಟು ಸಮಯ ಸುಮಾರು 13:45 ಗಂಟೆಗೆ ಕಾಪು ತಾಲೂಕು ತೆಂಕ ಎರ್ಮಾಳ್ ಗ್ರಾಮದ ಉಡುಪಿ ಇಂಟರ್ ನ್ಯಾಷಿನಲ್ ಹೋಟೆಲ್ ಹತ್ತಿರ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹಾದು ಹೋಗಿರುವ ರಾ ಹೆ 66 ರ ಏಕಮುಖ ಸಂಚಾರ ರಸ್ತೆಯಲ್ಲಿ ಹೋಗುತ್ತಿರುವಾಗ ಅದೇ ರಸ್ತೆಯಲ್ಲಿ ಹಿಂದಿನಿಂದ ಉಡುಪಿ ಕಡೆಗೆ ಬರುತ್ತಿದ್ದ ಓರ್ವ ಲಾರಿ ಚಾಲಕನು ಲಾರಿಯನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದಿದ್ದು ಕಾರನ್ನು ಮುಂದಕ್ಕೆ ದೂಡಿಕೊಂಡು ಹೋದ ಪರಿಣಾಮ ಕಾರಿನ ಎದುರು ಹೋಗುತ್ತಿದ್ದ ಬಸ್ಸಿನ ಹಿಂಬದಿಗೆ ಕಾರು ಢಿಕ್ಕಿಯಾಗಿದ್ದರಿಂದ ಕಾರಿನ ಮುಂಭಾಗ ಹಾಗೂ ಹಿಂಭಾಗ ಜಖಂಗೊಂಡಿರುತ್ತದೆ. ಈ ಅಪಘಾತದಿಂದ ಯಾರಿಗೂ ಯಾವುದೇ ಗಾಯಗಳಾಗಿರುವುದಿಲ್ಲ. ಅಪಘಾತ ಪಡಿಸಿದ ಲಾರಿಯ ಮುಂಭಾಗ ಜಖಂಗೊಂಡಿರುತ್ತದೆ. ಅಪಘಾತ ಪಡಿಸಿದ ಲಾರಿಯ ನಂಬ್ರ ನೋಡಲಾಗಿ KA-03 AP-1391 ನೇ ದಾಗಿದ್ದು ಅದರ ಚಾಲಕನ ಹೆಸರು ಕೇಳಲಾಗಿ ಖಾಜಾ ಸಾಬ್ ಎಂದು ತಿಳಿಸಿರುತ್ತಾನೆ. ಬಸ್ಸಿನ ನಂಬ್ರ ನೋಡಲಾಗಿ KA-39 A-6606 ಆಗಿದ್ದು ಬಸ್ಸಿನ ಚಾಲಕನು ತನಗೆ ಯಾವುದೇ ಕಾನೂನು ಕ್ರಮದ ಅಗತ್ಯವಿಲ್ಲವಾಗಿ ತಿಳಿಸಿ ಉಡುಪಿ ಕಡೆಗೆ ಹೋಗಿರುತ್ತಾನೆ. ಈ ಅಪಘಾತಕ್ಕೆ ಲಾರಿಯ ಅದರ ಚಾಲಕ ಖಾಜಾ ಸಾಬ್ ರವರು ಅತೀವೇಗ ಹಾಗೂ ಅಜಾಗುರೂಕತೆಯಿಂದ ಚಲಾಯಿಸಿದ್ದೇ ಕಾರಣವಾಗಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 120/2026 ಕಲಂ: 281 BNS ರಂತೆ ಪ್ರಕರಣ ದಾಖಲಾಗಿರುತ್ತದೆ.

ಅಪರಾಧ ಕ್ರಮಾಂಕ 120/2026

ಹಂಚಿಕೊಳ್ಳಿ: