ಮುಖ್ಯ ವಿಷಯಕ್ಕೆ ಹೋಗಿ
The Karnataka Today
13 Oct
ಸುದ್ದಿ
ಅಪರಾಧ

ಮಂಡ್ಯ: ಪ್ರೀತಿಗೆ ಅಡ್ಡಿಯಾದ ಅಜ್ಜಿಯನ್ನು ಪ್ರಿಯಕರನೊಂದಿಗೆ ಸೇರಿ ಕೊಂದ ಮೊಮ್ಮಗಳು

ಮಂಡ್ಯದ ಬೂಕನಕೆರೆಯಲ್ಲಿ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ ಅಜ್ಜಿಯನ್ನು ಅಪ್ರಾಪ್ತ ಮೊಮ್ಮಗಳು ತನ್ನ ಪ್ರಿಯಕರನೊಂದಿಗೆ ಸೇರಿ ಹತ್ಯೆ ಮಾಡಿದ್ದಾಳೆ. ಮತ್ತೊಂದೆಡೆ ದಾವಣಗೆರೆಯಲ್ಲಿ ಮದುವೆಯಾಗಬೇಕಿದ್ದ ಅಪ್ರಾಪ್ತೆಯನ್ನೇ ಯುವ...

· ಮಂಡ್ಯ
Mandya: ಪ್ರೀತಿಗೆ ಅಡ್ಡಿ, ಅಜ್ಜಿಯನ್ನು ಲವರ್ ಜೊತೆಗೆ ಸೇರಿ ಕೊಂದ ಮೊಮ್ಮಗಳು
ಹಂಚಿಕೊಳ್ಳಿ:

ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ, ಪ್ರೀತಿ ಸಂಬಂಧಕ್ಕೆ ಅಡ್ಡಿಯಾಗಿದ್ದ ಅಜ್ಜಿಯನ್ನು ಅಪ್ರಾಪ್ತ ಮೊಮ್ಮಗಳು ತನ್ನ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿರುವ ಪ್ರಕರಣ ವರದಿಯಾಗಿದೆ. ಮಹದೇವಮ್ಮ(50) ಹತ್ಯೆಗೀಡಾದ ಅಜ್ಜಿ. ಪ್ರಥಮ ಪಿಯು ವಿದ್ಯಾರ್ಥಿನಿ (16) ಹಾಗೂ ಆಕೆಯ ಪ್ರಿಯಕರ ಆಕಾಶ್ (28) ಈ ಕೊಲೆಯ ಆರೋಪಿಗಳಾಗಿದ್ದಾರೆ.

ಬಾಲಕಿ ಹಾಗೂ ಬೆಳತೂರು ಗ್ರಾಮದ ಆಕಾಶ್ ಪರಸ್ಪರ ಪ್ರೀತಿಸುತ್ತಿದ್ದರು. ಈ ಸಂಬಂಧಕ್ಕೆ ಅಜ್ಜಿ ಮಹದೇವಮ್ಮ ವಿರೋಧ ವ್ಯಕ್ತಪಡಿಸಿದ್ದರು. ಈ ಹಿಂದೆ ಆಕಾಶ್ ಮತ್ತು ಮಹದೇವಮ್ಮ ಅವರ ನಡುವೆ ಜಗಳ ನಡೆದಿತ್ತು ಎಂದು ಹೇಳಲಾಗಿದೆ. ಅಜ್ಜಿ ಮಹದೇವಮ್ಮ ಬಾಲಕಿಗೆ ಬೇರೆ ಕಡೆ ಮದುವೆ ಮಾಡಲು ಸಿದ್ಧತೆ ನಡೆಸುತ್ತಿದ್ದರು. ರಾತ್ರಿ ಬೂಕನಕೆರೆಯಲ್ಲಿರುವ ಅಜ್ಜಿಯ ಮನೆಗೆ ಮೊಮ್ಮಗಳು ಬಂದಿದ್ದಳು. ರಾತ್ರಿ ವೇಳೆ ಆಕಾಶ್‌ಗೆ ಕರೆ ಮಾಡಿ ಮನೆಗೆ ಕರೆಸಿಕೊಂಡ ಆಕೆ, ಆತನೊಂದಿಗೆ ಸೇರಿ ಅಜ್ಜಿಯನ್ನು ಹಲ್ಲೆ ನಡೆಸಿ ಕೊಲೆ ಮಾಡಿದ್ದಾಳೆ.

ಮದುವೆ ಆಗಬೇಕಿದ್ದ ಅಪ್ರಾಪ್ತೆಯನ್ನೇ ಗರ್ಭಿಣಿ ಮಾಡಿದ ಯುವಕ: ದೂರು

ದಾವಣಗೆರೆ: ಅಪ್ರಾಪ್ತೆಗೆ 18 ವರ್ಷ ತುಂಬಿದ ನಂತರ ಮದುವೆ ಮಾಡಿಕೊಡುವ ಬಗ್ಗೆ ಎರಡೂ ಕುಟುಂಬಗಳ ನಡುವೆ ಮಾತುಕತೆ ನಡೆದು ಒಪ್ಪಂದವಾಗಿದ್ದರೂ, ಯುವಕನೊಬ್ಬ ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಈ ಸಂಬಂಧ ಯುವಕನ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ.

ಯುವಕನ ಕುಟುಂಬದವರು ಮತ್ತು ಅಪ್ರಾಪ್ತೆಯ ಕುಟುಂಬದವರು ಬಾಲಕಿಗೆ 18 ವರ್ಷ ತುಂಬಿದ ಬಳಿಕ ಇಬ್ಬರಿಗೂ ಮದುವೆ ಮಾಡಿಸಲು ನಿರ್ಧರಿಸಿದ್ದರು. ಈ ಅವಧಿಯಲ್ಲಿ ಯುವಕ ಆಗಾಗ್ಗೆ ಅಪ್ರಾಪ್ತೆಯ ಮನೆಗೆ ಭೇಟಿ ನೀಡುತ್ತಿದ್ದ. ಇದರಿಂದ ಅವರ ನಡುವೆ ಸಲುಗೆ ಬೆಳೆದಿತ್ತು ಎಂದು ಹೇಳಲಾಗಿದೆ.

ಯುವಕ ಅಪ್ರಾಪ್ತೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದನು. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಅಪ್ರಾಪ್ತೆಯನ್ನು ಪಾಲಕರು ಆಸ್ಪತ್ರೆಗೆ ದಾಖಲಿಸಿದಾಗ, ಆಕೆ ಗರ್ಭಿಣಿಯಾಗಿರುವುದು ಪತ್ತೆಯಾಗಿದೆ. ಆ ಯುವಕನ ಜೊತೆಯೇ ಮದುವೆ ಮಾಡಿಸೋಣ ಎಂದರೆ ಹುಡುಗಿ ಇನ್ನೂ ಅಪ್ರಾಪ್ತೆಯಾಗಿರುವುದು ಹಾಗೂ 18 ವರ್ಷ ತುಂಬದೇ ಮದುವೆ ಮಾಡುವಂತಿಲ್ಲ ಎಂಬ ಚಿಂತೆಯು ಪೋಷಕರನ್ನು ಕಾಡುತ್ತಿದೆ.

ಹಂಚಿಕೊಳ್ಳಿ: