ಮುಖ್ಯ ವಿಷಯಕ್ಕೆ ಹೋಗಿ
The Karnataka Today
13 Oct
ಸುದ್ದಿ
ಭಾರತ

ಪುಣೆ ಟೆಕ್ಕಿ ಆತ್ಮಹತ್ಯೆ: ವೇತನ, ಫ್ಲಾಟ್ ವರ್ಗಾಯಿಸುವಂತೆ ಅತ್ತೆ-ಮಾವನ ಕಿರುಕುಳ

ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ವರದಕ್ಷಿಣೆಗಾಗಿ ಅತ್ತೆ-ಮಾವಂದಿರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ 33 ವರ್ಷದ ಐಟಿ(IT) ಎಂಜಿನಿಯರ್ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಪೊಲೀಸರು ಆಕೆಯ...

ಪುಣೆ ಟೆಕ್ಕಿ ಆತ್ಮಹತ್ಯೆ: ಡೆತ್‌ನೋಟ್‌ ಪತ್ತೆ; ಸಂಬಳ, ತವರು ಮನೆಯ ಫ್ಲಾಟ್ ವರ್ಗಾಯಿಸುವಂತೆ ಅತ್ತೆ-ಮಾವ ಒತ್ತಡ!
ಹಂಚಿಕೊಳ್ಳಿ:

ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ವರದಕ್ಷಿಣೆ ಬೇಡಿಕೆ ಹಿನ್ನೆಲೆಯಲ್ಲಿ ಅತ್ತೆ-ಮಾವಂದಿರು ತೊಂದರೆ ನೀಡುತ್ತಿದ್ದಾರೆ ಎಂದು ದೂರಿದ 33 ವರ್ಷದ ಐಟಿ(IT) ಎಂಜಿನಿಯರ್ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿ ಹಾಗೂ ಆತನ ಕುಟುಂಬಸ್ಥರ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಮೃತಪಟ್ಟ ಮಹಿಳೆಯನ್ನು ತ್ರಿಷ್ಣಾ ರಾಹುಲ್ ಸಕ್ಪಾಲ್ ಎಂದು ಗುರುತಿಸಲಾಗಿದೆ. ಆಕೆಯ ತಂದೆ ಬಾಲಕೃಷ್ಣ ನಿಕಮ್ ಅವರು ಸಲ್ಲಿಸಿದ ದೂರಿನನ್ವಯ, ತ್ರಿಷ್ಣಾ ಅವರು 2018ರಲ್ಲಿ ರಾಹುಲ್ ಸಕ್ಪಾಲ್ ಅವರನ್ನು ಮದುವೆಯಾಗಿದ್ದರು.

ಮದುವೆಯ ಬಳಿಕ, ತಮ್ಮ ಪೂರ್ತಿ ವೇತನವನ್ನು ನೀಡುವಂತೆ ಹಾಗೂ ತವರು ಮನೆಯ ಕೋಟ್ಯಾಂತರ ರೂ. ಮೌಲ್ಯದ ಫ್ಲಾಟ್ ಅನ್ನು ಅತ್ತೆಯ ಹೆಸರಿಗೆ ವರ್ಗಾಯಿಸಬೇಕೆಂದು ಮತ್ತು ಮಾವನಿಗಾಗಿ 1 ಕೋಟಿ ರೂ. ಬೆಲೆಯ ಫ್ಲಾಟ್ ಖರೀದಿಸಬೇಕೆಂದು ಆಕೆಯ ಮೇಲೆ ಒತ್ತಡ ಹಾಕಲಾಗುತ್ತಿತ್ತು ಎಂದು ನಿಕಮ್ ಆರೋಪಿಸಿದ್ದಾರೆ.

ದೈಹಿಕ ಮತ್ತು ಮಾನಸಿಕ ಹಿಂಸೆಯಿಂದ ಬೇಸತ್ತ ತ್ರಿಷ್ಣಾ ಅವರು 2021ರಲ್ಲಿ ತವರು ಮನೆಗೆ ವಾಪಸಾಗಿದ್ದರು. ಆನಂತರ ಆಕೆಯ ಪತಿ ಮರುಮದುವೆಯಾಗಲು ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು; ಆದರೆ ಈ ವಿಷಯವು ಸದ್ಯ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ.

ನಂತರ, ಕಳೆದ ಸೆಪ್ಟೆಂಬರ್ 29 ರಂದು ಅವರು ತಮ್ಮ ನಿವಾಸದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪೊಲೀಸರಿಗೆ ಸಿಕ್ಕಿದ ಡೆತ್ ನೋಟ್‌ನಲ್ಲಿ, ತಮ್ಮ ಸಾವಿಗೆ ಪತಿ, ಅತ್ತೆ ವೈಶಾಲಿ, ಮಾವ ಸಂಜಯ್, ನಾದಿನಿ ಶೈಲಿ ಮತ್ತು ಅಜ್ಜಿ ಶಕುಂತಲಾ ಸಾಳುಂಕೆ ಕಾರಣ ಎಂದು ಅವರು ಬರೆದಿದ್ದರು.

ಮಹಿಳೆಯ ತಂದೆ ನೀಡಿದ ದೂರಿನ ಮೇರೆಗೆ ಐವರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಹಂಚಿಕೊಳ್ಳಿ: