ಮದನಪಲ್ಲೆ ಲಾಡ್ಜ್ನಲ್ಲಿ ಪತ್ನಿ ರೂಬಿಯಾ ತಾಜ್ ಹತ್ಯೆಗೈದ ಪತಿ ಶೇಕ್ ನವೀದ್ ಬಾಷಾ
ಆಂಧ್ರಪ್ರದೇಶದ ಮದನಪಲ್ಲೆ ಲಾಡ್ಜ್ನಲ್ಲಿ ಅನೈತಿಕ ಸಂಬಂಧದ ಶಂಕೆಯಿಂದ ಕರ್ನಾಟಕದ ಕೋಲಾರ ಮೂಲದ ರೂಬಿಯಾ ತಾಜ್ ಎಂಬ ವಿವಾಹಿತ ಮಹಿಳೆಯನ್ನು ಆಕೆಯ ಪತಿ ನವೀದ್ ಬಾಷಾ ಬೀರು ಬಾಟಲಿಯಿಂದ ಹೊಡೆದು ಗಂಟಲು ಕೊಯ್ದು ಭೀಕರವಾಗಿ ಹತ್...

ಆಂಧ್ರಪ್ರದೇಶದ ಮದನಪಲ್ಲೆಯ ಲಾಡ್ಜ್ ಒಂದರಲ್ಲಿ ಕೋಲಾರ ಜಿಲ್ಲೆಯ ಮುಳಬಾಗಿಲು ಮೂಲದ ರೂಬಿಯಾ ತಾಜ್ ಎಂಬಾಕೆಯ ಕೊಲೆಯಾಗಿದೆ. ಅನೈತಿಕ ಸಂಬಂಧದ ಅನುಮಾನದಿಂದ ಆಕೆಯ ಪತಿ ಬೈಕ್ ಮೆಕ್ಯಾನಿಕ್ ಶೇಕ್ ನವೀದ್ ಬಾಷಾ ಈ ಕೃತ್ಯ ಎಸಗಿದ್ದಾನೆ. ಸಂಧಾನದ ಬಳಿಕ ಪತ್ನಿಯನ್ನು ಶಾಪಿಂಗ್ ಕರೆದೊಯ್ದಿದ್ದ ಆರೋಪಿ, ಲಾಡ್ಜ್ನಲ್ಲಿ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿ ಗಂಟಲು ಕೊಯ್ದು ಹತ್ಯೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ ನವೀದ್ ಬಾಷಾ ಮದನಪಲ್ಲೆ ಒನ್ ಟೌನ್ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.



