ನವದೆಹಲಿಯಲ್ಲಿ ಭಾರತದ ಕಾನೂನು ಪಾಲಿಸಿದರೆ ಸ್ಟಾರ್ಲಿಂಕ್ಗೆ ಸ್ವಾಗತ ಎಂದ ರಿಲಯನ್ಸ್
ನವದೆಹಲಿ: ಸ್ಯಾಟಲೈಟ್ ಕಮ್ಯುನಿಕೇಷನ್ಸ್ ಕ್ಷೇತ್ರದಲ್ಲಿ ಇಲಾನ್ ಮಸ್ಕ್ ಅವರ 'ಸ್ಟಾರ್ಲಿಂಕ್' ಸೇರಿದಂತೆ ಯಾವುದೇ ಸ್ಪರ್ಧೆಗೂ ನಾವು ಹೆದರುವುದಿಲ್ಲ ಹಾಗೂ ಅದನ್ನು ಸ್ವಾಗತಿಸುತ್ತೇವೆ. ಆದರೆ ಪ್ರತಿಯೊಂದು ಕಂಪನಿಯೂ ಭಾರತದ...

ಸ್ಯಾಟಲೈಟ್ ಕಮ್ಯುನಿಕೇಷನ್ಸ್ ವಲಯದಲ್ಲಿ ಇಲಾನ್ ಮಸ್ಕ್ ಅವರ ಸ್ಟಾರ್ಲಿಂಕ್ ಸೇರಿದಂತೆ ಯಾವುದೇ ಕಂಪನಿಯ ಸ್ಪರ್ಧೆಯನ್ನು ನಾವು ಸ್ವಾಗತಿಸುತ್ತೇವೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸ್ಪಷ್ಟಪಡಿಸಿದೆ. ಆದರೆ ಮಾರುಕಟ್ಟೆಗೆ ಪ್ರವೇಶಿಸುವ ಪ್ರತಿಯೊಂದು ಸಂಸ್ಥೆಯೂ ಭಾರತದ ಕಾನೂನು ಹಾಗೂ ನೀತಿ ನಿಯಮಗಳಿಗೆ ಕಡ್ಡಾಯವಾಗಿ ಬದ್ಧವಾಗಿರಬೇಕು ಎಂದು ಸಂಸ್ಥೆ ತಿಳಿಸಿದೆ. ಇಲಾನ್ ಮಸ್ಕ್ ಅವರು ಇತ್ತೀಚೆಗೆ ರಿಲಯನ್ಸ್ ಕುರಿತು ಮಾಡಿದ್ದ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ಕಂಪನಿಯು, ತಾವು ಎಂದಿಗೂ ಸ್ಪರ್ಧೆಗೆ ಹೆದರುವುದಿಲ್ಲ ಎಂದು ಹೇಳಿದೆ. 2016ರಲ್ಲಿ ಶೂನ್ಯ ಗ್ರಾಹಕರೊಂದಿಗೆ ಆರಂಭವಾದ ಜಿಯೊ, ಇಂದು 53 ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ತನ್ನ ಸ್ಯಾಟಲೈಟ್ ಸೇವೆಗಳಿಗಾಗಿ ಸರ್ಕಾರಿ ಅನುಮತಿಯ ನಿರೀಕ್ಷೆಯಲ್ಲಿದೆ.




