ಹೆಬ್ರಿ: ಅಪಘಾತ ಪ್ರಕರಣ
ದಿನಾಂಕ 15/10/2026 ರಂದು ಬೆಳಿಗ್ಗೆ 11.00 ಗಂಟೆಗೆ ಕಾರು ನಂ KA 01MH 2451 ನೇದನ್ನು ಅದರ ಚಾಲಕ ಮುರಳೀಧರ ಎಂಬವರು ಆಗುಂಬೆ ಕಡೆಯಿಂದ ಹೆಬ್ರಿ ಕಡೆಗೆ ರಾಷ್ಟ್ರೀಯ ಹೆದ್ದಾರಿ 169 ಎ ರಲ್ಲಿ ಅತೀ ವೇಗ ಮತ್ತು ಅಜಾಗರೂ...

ದಿನಾಂಕ 15/10/2026 ರಂದು ಬೆಳಿಗ್ಗೆ 11.00 ಗಂಟೆಗೆ ಕಾರು ನಂ KA 01MH 2451 ನೇದನ್ನು ಅದರ ಚಾಲಕ ಮುರಳೀಧರ ಎಂಬವರು ಆಗುಂಬೆ ಕಡೆಯಿಂದ ಹೆಬ್ರಿ ಕಡೆಗೆ ರಾಷ್ಟ್ರೀಯ ಹೆದ್ದಾರಿ 169 ಎ ರಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಾಡ್ಪಾಲು ಗ್ರಾಮದ ಸೋಮೇಶ್ವರ ಚೆಕ್ ಫೋಸ್ಟ್ ಬಳಿ ತನ್ನ ಮುಂದಿನಿಂದ ಹೋಗುತ್ತಿದ್ದ ಕಾರು ನಂ KA 02 MS 4698 ಇದರ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಬಳಿಕ ಹೆಬ್ರಿ ಕಡೆಯಿಂದ ಬರುತ್ತಿದ್ದ ಸ್ಕೂಟರ್ ನಂ KA 14 EZ 6747 ನೇದಕ್ಕೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ನಲ್ಲಿ ಸವಾರಿ ಮಾಡುತ್ತಿದ್ದ ಸವಾರ ಅವಿನಾಶ್ ಹಾಗೂ ಸಹ ಸವಾರ ಮುಸ್ತಾಕ್ ಎಂಬವರು ಗಾಯಗೊಂಡಿದ್ದು ಮೂರೂ ವಾಹನಗಳು ಜಖಂಗೊಂಡಿರುವುದಾಗಿದೆ.ಈ ಬಗ್ಗೆ ಮಹೇಶ (50) ಅಪ್ಪಿ ನಿಲಯ ಕುಂದಾರಡಿಗೆ ಕುರುವಳ್ಳಿ ರವರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ:55/2026 ಕಲಂ: 281 125 (ಎ) BNS ರಂತೆ ಪ್ರಕರಣ ದಾಖಲಿಸಲಾಗಿದೆ.
ರವರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆ — ಅಪರಾಧ ಕ್ರಮಾಂಕ 55/2026



