ಬೈಂದೂರು: ಅಸ್ವಾಭಾವಿಕ ಮರಣ ಪ್ರಕರಣ
ಪಿರ್ಯಾದಿದಾರರಾದ ನಾಗ ದೇವಾಡಿಗ (51), ಕೆರ್ಗಾಲ್ ಗ್ರಾಮ, ಬೈಂದೂರು ಇವರ ಅಕ್ಕನ ಗಂಡ ಶಂಕರ ದೇವಾಡಿಗ (72) ರವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಅವರಿಗೆ ಈ ಬಗ್ಗೆ ಕುಂದಾಪುರದ ಮಾತಾ ಆಸ್ಪತ್ರೆಯಲ್ಲಿ ಚಿಕಿತ್...

ಪಿರ್ಯಾದಿದಾರರಾದ ನಾಗ ದೇವಾಡಿಗ (51), ಕೆರ್ಗಾಲ್ ಗ್ರಾಮ, ಬೈಂದೂರು ಇವರ ಅಕ್ಕನ ಗಂಡ ಶಂಕರ ದೇವಾಡಿಗ (72) ರವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಅವರಿಗೆ ಈ ಬಗ್ಗೆ ಕುಂದಾಪುರದ ಮಾತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರು. ಶಂಕರ ದೇವಾಡಿಗರವರು ದಿನಾಂಕ 11/10/2026 ರಂದು ಬೆಳಿಗ್ಗೆ 11:30 ಗಂಟೆಗೆ ಅವರ ಮೂಲ ಮನೆಯಾದ ಅಡಿಗಳ ಬೆಟ್ಟು ಮೊಗೇರಿ ಎಂಬಲ್ಲಿಗೆ ಹೋಗಿ ಅಲ್ಲಿಂದ ವಾಪಾಸ್ಸು ಪಿರ್ಯಾದಿದಾರರ ಮನೆಗೆ ಹೊರಟವರು ಮನೆಗೂ ಬಾರದೇ ಬೇರೆ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಠಾಣಾ ಅಕ್ರ 140/2026 ಕಲಂ ಗಂಡಸು ಕಾಣೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 15/10/2026 ರಂದು ಪಿರ್ಯಾದಿದಾರರು ಮತ್ತು ಅವರ ಸಂಬಂಧಿಕರು ಸೇರಿ ಶಂಕರ ದೇವಾಡಿಗರವರನ್ನು ಹುಡುಕುತ್ತಿರುವಾಗ ಸಂಜೆ 05:00 ಗಂಟೆಗೆ ಬಿಜೂರು ಗ್ರಾಮದ ರೈಲ್ವೆ ಸ್ಟೇಶನ್ ಹತ್ತಿರದಲ್ಲಿರುವ ಗದ್ದೆಯಲ್ಲಿ ಪಿರ್ಯಾದಿದಾರರ ಬಾವ ಕವುಚಾಗಿ ಬಿದ್ದು ಮೃತಪಟ್ಟು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 57/2026 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.
ಬೈಂದೂರು ಪೊಲೀಸ್ ಠಾಣೆ



