ಕುಂದಾಪುರ: ಇತರ ಪ್ರಕರಣ
ಪಿರ್ಯಾದಿದಾರರಾದ ಪ್ರಕಾಶ (35), ಕಾವ್ರಾಡಿ ಗ್ರಾಮ ಕುಂದಾಪುರ ಇವರು ಕೃಷಿ ಕೆಲಸ ಮಾಡಿಕೊಂಡಿದ್ದು, ಮನೆಯಲ್ಲಿ ಕೃಷಿ ಗೊಬ್ಬರ ಮತ್ತು ಹೈನುಗಾರಿಕೆಯ ಬಗ್ಗೆ ಹಸುಗಳನ್ನು ಸಾಕಿ ಪ್ರತಿ ನಿತ್ಯ ದನಗಳನ್ನು ಮೇಯಲು ಮನೆಯ ಸಮೀ...

ಪಿರ್ಯಾದಿದಾರರಾದ ಪ್ರಕಾಶ (35), ಕಾವ್ರಾಡಿ ಗ್ರಾಮ ಕುಂದಾಪುರ ಇವರು ಕೃಷಿ ಕೆಲಸ ಮಾಡಿಕೊಂಡಿದ್ದು, ಮನೆಯಲ್ಲಿ ಕೃಷಿ ಗೊಬ್ಬರ ಮತ್ತು ಹೈನುಗಾರಿಕೆಯ ಬಗ್ಗೆ ಹಸುಗಳನ್ನು ಸಾಕಿ ಪ್ರತಿ ನಿತ್ಯ ದನಗಳನ್ನು ಮೇಯಲು ಮನೆಯ ಸಮೀಪ ಇರುವ ಗೇರುಹಾಡಿಗೆ ಬಿಡುತ್ತಾರೆ. ದಿನಾಂಕ 15/10/2026 ರಂದು ಮದ್ಯಾಹ್ನ 01:15 ಗಂಟೆಗೆ ಪಿರ್ಯಾದಿದಾರರ ಮನೆಯ ಸಮೀಪ ವಾಲ್ತೂರು ಗ್ರಾಮದ ವಾಲ್ತೂರು ಕೊಕ್ಕೋಡಿಗೆ ಹೋಗುವ ದಾರಿಯ ಬಳಿ ಗೇರು ಹಾಡಿಯಲ್ಲಿ ಮೇಯುತ್ತಿದ್ದ ಪಿರ್ಯಾದಿದಾರರ ಮನೆಯ ಒಂದು ದನವನ್ನು ಆಪಾದಿತರುಗಳಾದ ಇಮ್ತಿಯಾಝ್, ರಿಜ್ವಾನ್ @ ದಸ್ತಗೀರ್ ಮತ್ತು ಜಿಮಾಮ್ ಸೇರಿ ದನದ ಕಾಲಿಗೆ ಬಟ್ಟೆಯನ್ನು ಕಟ್ಟಿ ಹಿಂಸಾತ್ಮಕವಾಗಿ ಕಾರಿಗೆ ತುಂಬಿಸಲು ಎಳೆದುಕೊಂಡು ಹೋಗಿ ಕಳವಿಗೆ ಯತ್ನಿಸುತ್ತಿದ್ದಾಗ ದಾರಿಯಲ್ಲಿ ಹೋಗುತ್ತಿದ್ದ ಹರೀಶ ಶೆಟ್ಟಿ ಎಂಬುವವರನ್ನು ನೋಡಿ ದನವನ್ನು ಬಿಟ್ಟು KA-03-AG-8985 ಮಹೇಂದ್ರ ಝಯಿಲೋ ಕಾರಿನಲ್ಲಿ ಮತ್ತು KA-20-ET-8215ನೇ ಸ್ಕೂಟಿಯಲ್ಲಿ ಅಲ್ಲಿಂದ ಓಡಿಹೋಗಿ ಸುಮಾರು 2 ಕೀಮಿ ದೂರ ಕಾವ್ರಾಡಿ ಗ್ರಾಮದ ಜೋಗಿಬೆಟ್ಟು ಎಂಬಲ್ಲಿ ಕಾರು ರಸ್ತೆಯ ಬದಿಯಲ್ಲಿ ಬಿಟ್ಟು ಸ್ಕೂಟಿಯಲ್ಲಿ ಓಡಿ ಹೋಗಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 59/2026 ಕಲಂ:303 (2), 62, 351(2) ಜೊತೆಗೆ 3(5) BNS ಮತ್ತು 11(1)(D) prevention of cruelty to animal act ರಂತೆ ಪ್ರಕರಣ ದಾಖಲಾಗಿರುತ್ತದೆ.
ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ — ಅಪರಾಧ ಕ್ರಮಾಂಕ 59/2026



