ಮುಖ್ಯ ವಿಷಯಕ್ಕೆ ಹೋಗಿ
The Karnataka Today
16 Oct
ಸುದ್ದಿ
ಶಿಕ್ಷಣ

ಎಂಬಿಬಿಎಸ್ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಐದನೇ ಬಾರಿ ಪರೀಕ್ಷೆ ಬರೆಯಲು ಎನ್‌ಎಂಸಿ ಅವಕಾಶ

ಮೊದಲ ವರ್ಷದ ಎಂಬಿಬಿಎಸ್‌ ಪರೀಕ್ಷೆಯಲ್ಲಿ ಅನುತ್ತೀರ್ಣರಾದ 2019-20ನೇ ಸಾಲಿನ ನಂತರದ ವಿದ್ಯಾರ್ಥಿಗಳಿಗೆ ಐದನೇ ಬಾರಿ ಪರೀಕ್ಷೆ ಬರೆಯಲು ಎನ್‌ಎಂಸಿ ಒಂದು ಬಾರಿಯ ವಿಶೇಷ ಅವಕಾಶ ನೀಡಿದೆ.

MBBS ಪರೀಕ್ಷೆಯಲ್ಲಿ ಫೇಲಾದವರಿಗೂ ಮತ್ತೊಂದು ಚಾನ್ಸ್‌: ಎನ್‌ಎಂಸಿ ಮಹತ್ವದ ನಿರ್ಧಾರ
ಹಂಚಿಕೊಳ್ಳಿ:

2019-20ನೇ ಸಾಲು ಮತ್ತು ನಂತರದ ಶೈಕ್ಷಣಿಕ ವರ್ಷದಲ್ಲಿ ಎಂಬಿಬಿಎಸ್‌ಗೆ ಸೇರ್ಪಡೆಯಾದ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗವು ವಿಶೇಷ ವಿನಾಯಿತಿ ನೀಡಿದೆ. ಮೊದಲ ವರ್ಷದ ವೃತ್ತಿಪರ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಈವರೆಗೆ ಇದ್ದ ನಾಲ್ಕು ಪ್ರಯತ್ನಗಳ ಮಿತಿಯನ್ನು ಐದಕ್ಕೆ ಹೆಚ್ಚಿಸಲಾಗಿದೆ. ಕೋವಿಡ್-19 ಸಾಂಕ್ರಾಮಿಕ ಹಾಗೂ ವೈಯಕ್ತಿಕ ಕಾರಣಗಳಿಂದ ಪರೀಕ್ಷೆ ಪೂರ್ಣಗೊಳಿಸಲು ಸಾಧ್ಯವಾಗದ ವಿದ್ಯಾರ್ಥಿಗಳ ಮನವಿಯನ್ನು ಪರಿಗಣಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ಪ್ರವೇಶ ರದ್ದಾಗಿರುವ ಅಭ್ಯರ್ಥಿಗಳು ಹಾಗೂ ಈಗಾಗಲೇ ಐದನೇ ಪ್ರಯತ್ನದ ಅವಕಾಶ ಪಡೆದವರಿಗೆ ಈ ನಿಯಮ ಅನ್ವಯಿಸುವುದಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ. ವೈದ್ಯಕೀಯ ಶಿಕ್ಷಣವನ್ನು ಪ್ರವೇಶ ಪಡೆದ ದಿನದಿಂದ ಗರಿಷ್ಠ 10 ವರ್ಷಗಳ ಒಳಗಾಗಿ ಪೂರ್ಣಗೊಳಿಸಬೇಕೆಂಬ ಷರತ್ತನ್ನು ಕಡ್ಡಾಯಗೊಳಿಸಲಾಗಿದೆ.

ಹಂಚಿಕೊಳ್ಳಿ: