ಕುಂದಾಪುರ: ಅಪಘಾತ ಪ್ರಕರಣ
ದಿನಾಂಕ 13/10/2026 ರಂದು ಸಂಜೆ ಸುಮಾರು 16-45 ಗಂಟೆಗೆ, ಕುಂದಾಪುರ ತಾಲೂಕಿನ ಬೀಜಾಡಿ ಗ್ರಾಮದ ಬೀಜಾಡಿ ಬೇಲಿಹಿತ್ಲು ಎಂಬಲ್ಲಿ ಪಿರ್ಯಾದಿ ಕೋಡಿ ಬಾಪು ನೈನಾರ್ (59) ಕೋಡಿ ಗ್ರಾಮ,ಕುಂದಾಪುರ ಇವರ ಮಗನಾದ ಮುರ್ಷಿದನು ...

ದಿನಾಂಕ 13/10/2026 ರಂದು ಸಂಜೆ ಸುಮಾರು 16-45 ಗಂಟೆಗೆ, ಕುಂದಾಪುರ ತಾಲೂಕಿನ ಬೀಜಾಡಿ ಗ್ರಾಮದ ಬೀಜಾಡಿ ಬೇಲಿಹಿತ್ಲು ಎಂಬಲ್ಲಿ ಪಿರ್ಯಾದಿ ಕೋಡಿ ಬಾಪು ನೈನಾರ್ (59) ಕೋಡಿ ಗ್ರಾಮ,ಕುಂದಾಪುರ ಇವರ ಮಗನಾದ ಮುರ್ಷಿದನು ಪಿರ್ಯಾದಿದಾರರ ಸಂಬಂದಿಕರಾದ ಆಶೀಪ್ ರವರ ಮನೆ ಕಡೆಯಿಂದ ಸೈಕಲ್ ಸವಾರಿ ಮಾಡಿಕೊಂಡು ಕನ್ಯಾನ ಕೋಡಿ ರಸ್ತೆಗೆ ತಲುಪುವಷ್ಟರಲ್ಲಿ ಆಪಾದಿತ ಗೂಡ್ಸ್ ರಿಕ್ಷಾ ಚಾಲಕ ದೇವರಾಜ್ ತನ್ನ ಬಾಬ್ತು ಗೂಡ್ಸ್ ರಿಕ್ಷಾ KA20AC8771 ನೇಯದನ್ನು ಕೋಡಿ ಕನ್ಯಾನ ರಸ್ತೆಯಿಂದ ಕೋಡಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರ ಬಲ ಬದಿಗೆ ಬಂದು ಪಿರ್ಯಾದಿದಾರರ ಮಗ ಮುರ್ಷಿದ್ನ ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಮುರ್ಷಿದನಿಗೆ ಕಾಲಿಗೆ ಒಳಪೆಟ್ಟಾಗಿದ್ದು ತಲೆಗೆ ರಕ್ತ ಗಾಯವಾಗಿದ್ದವರನ್ನು ಚಿಕಿತ್ಸೆ ಬಗ್ಗೆ ಕೋಟೆಶ್ವರ ಎನ್ಆರ್ ಆಚಾರ್ಯ ಆಸ್ಪತ್ರೆಗೆ ದಾಖಲಿಸಲಾಗಿ ವೈದ್ಯಾದಿಕಾರಿಯವರು ಪರಿಕ್ಷಿಸಿ ಒಳ ರೋಗಿಯನ್ನಾಗಿ ದಾಖಲಿಸಿಕೊಂಡಿದ್ದು, ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 85/2026 ಕಲಂ: 281, 125(A) BNS ರಂತೆ ಪ್ರಕರಣ ದಾಖಲಾಗಿರುತ್ತದೆ.
ಕುಂದಾಪುರ ಸಂಚಾರ ಪೊಲೀಸ್ ಠಾಣೆ — ಅಪರಾಧ ಕ್ರಮಾಂಕ 85/2026



