ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಅಪರಾಧ

ಕೋಟ: ರಬ್ಬರ್ ಪ್ಲಾಂಟ್ ಕೆಲಸಗಾರರ ನಡುವಿನ ಗಲಾಟೆ, ಏರ್ ಗನ್ ನಿಂದ ಗುಂಡು ಹಾರಿಸಿ ಹಲ್ಲೆ

ಕೋಟದ ಜಾನುವಾರುಕಟ್ಟೆ ಬಳಿ ಬಿಬಿನ್ ಮ್ಯಾಥ್ಯೂ ಎಂಬುವರ ಮೇಲೆ ಏರ್ ಗನ್ ನಿಂದ ಗುಂಡು ಹಾರಿಸಿ ಹಲ್ಲೆ ನಡೆಸಿದ ಆರೋಪದಡಿ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನ ಪ್ರಕಾರ, ಪಿರ್ಯಾದುದಾರರ ಬಳಿ ಕೆಲಸ ಮಾಡ...

· ಉಡುಪಿ
ಪೊಲೀಸ್ ವಾಹನ
ಹಂಚಿಕೊಳ್ಳಿ:

ಕೋಟದ ಜಾನುವಾರುಕಟ್ಟೆ ಬಳಿ ಬಿಬಿನ್ ಮ್ಯಾಥ್ಯೂ ಎಂಬುವರ ಮೇಲೆ ಏರ್ ಗನ್ ನಿಂದ ಗುಂಡು ಹಾರಿಸಿ ಹಲ್ಲೆ ನಡೆಸಿದ ಆರೋಪದಡಿ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನ ಪ್ರಕಾರ, ಪಿರ್ಯಾದುದಾರರ ಬಳಿ ಕೆಲಸ ಮಾಡುತ್ತಿದ್ದ ಜೋಸ್ ಮತ್ತು ಸುರೇಶ್ ಎಂಬವರು ಕೆಲಸ ಬಿಟ್ಟು, ಅದೇ ಗ್ರಾಮದಲ್ಲಿ ರಬ್ಬರ್ ಪ್ಲಾಂಟ್ ಹೊಂದಿರುವ ಸಂತೋಷ್ ಎಂಬಾತನ ಬಳಿ ಕೆಲಸಕ್ಕೆ ಸೇರಿಕೊಂಡಿದ್ದರು. ಈ ವಿಚಾರವಾಗಿ ಅವರ ನಡುವೆ ವೈಮನಸ್ಸು ಉಂಟಾಗಿತ್ತು ಎನ್ನಲಾಗಿದೆ.

ದಿನಾಂಕ 05.11.2026 ರಂದು ರಾತ್ರಿ 22.10 ಗಂಟೆಗೆ ಪಿರ್ಯಾದುದಾರರ ಬಳಿ ಕೆಲಸ ಮಾಡುವ ಅಜಯ್ ಎಂಬವನು, ಆರೋಪಿಗಳು ಸ್ಕೂಟಿಯಲ್ಲಿ ಬಂದು ಓಮಿನಿಗೆ ಅಡ್ಡ ಹಾಕಿದ್ದಾರೆ ಎಂದು ಮಾಹಿತಿ ನೀಡಿದ್ದಾನೆ. ತಕ್ಷಣ ಪಿರ್ಯಾದುದಾರರು ಸ್ಥಳಕ್ಕೆ ಧಾವಿಸಿದ್ದಾರೆ.

ಸ್ಥಳಕ್ಕೆ ಬಂದಾಗ ಮೂರನೇ ಆರೋಪಿ ಸಂತೋಷ್, ಪಿರ್ಯಾದುದಾರರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಬಳಿಕ ತನ್ನ ಜೊತೆಗಿದ್ದ ವ್ಯಕ್ತಿಗೆ ಏರ್ ಗನ್ ನಿಂದ ಶೂಟ್ ಮಾಡಲು ಸೂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆ ವ್ಯಕ್ತಿ ಏರ್ ಗನ್ ನಿಂದ ಶೂಟ್ ಮಾಡಿದ ಪರಿಣಾಮ ಪಿರ್ಯಾದುದಾರರ ಬಲ ತೊಡೆ ಹಾಗೂ ಸೊಂಟದ ಭಾಗಕ್ಕೆ ಪೆಲ್ಲೆಟ್ ತಾಗಿ ರಕ್ತಗಾಯವಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 175/2026 ಕಲಂ 126(2), 115(2), 118(1), 109, 352, 351(3) ಜೊತೆಗೆ 3(5) ಬಿಎನ್ಎಸ್ ಹಾಗೂ 25 ಆರ್ಮ್ಸ್ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ತನಿಖೆಯ ನಂತರವಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

ಕೋಟ ಪೊಲೀಸ್ ಠಾಣೆ — ಅಪರಾಧ ಕ್ರಮಾಂಕ 175/2026

ಹಂಚಿಕೊಳ್ಳಿ: