ಮುಖ್ಯ ವಿಷಯಕ್ಕೆ ಹೋಗಿ
The Karnataka Today
14 Oct
ಅಪರಾಧ

ಕೋಟ: ಇತರ ಪ್ರಕರಣ

ದಿನಾಂಕ 13/10/2026 ರಂದು ರಾತ್ರಿ 8:30 ಗಂಟೆಗೆ ಕೋಟ ಠಾಣೆಯ ಪಿ.ಎಸ್.ಐ. ಪ್ರವೀಣ ಕುಮಾರ್ ಆರ್ ರವರಿಗೆ ಬಾತ್ಮೀದಾರರೊಬ್ಬರು ಕರೆಮಾಡಿ, ಕೊಟೇಶ್ವರ ಕಡೆಯಿಂದ ಉಡುಪಿ ಕಡೆಗೆ ಒಂದು ಬುಲೇರೋ ಪಿಕ್ಅಪ್ ವಾಹನ ನಂಬ್ರ KA-4...

· ಉಡುಪಿ
ಅಪರಾಧ ಪ್ರಕರಣ — ಜಿಲ್ಲಾ ಪೊಲೀಸ್ ವರದಿ
ಹಂಚಿಕೊಳ್ಳಿ:

ದಿನಾಂಕ 13/10/2026 ರಂದು ರಾತ್ರಿ 8:30 ಗಂಟೆಗೆ ಕೋಟ ಠಾಣೆಯ ಪಿ.ಎಸ್.ಐ. ಪ್ರವೀಣ ಕುಮಾರ್ ಆರ್ ರವರಿಗೆ ಬಾತ್ಮೀದಾರರೊಬ್ಬರು ಕರೆಮಾಡಿ, ಕೊಟೇಶ್ವರ ಕಡೆಯಿಂದ ಉಡುಪಿ ಕಡೆಗೆ ಒಂದು ಬುಲೇರೋ ಪಿಕ್ಅಪ್ ವಾಹನ ನಂಬ್ರ KA-40-B-8708 ನೇದರಲ್ಲಿ ಅಕ್ರಮವಾಗಿ ಮಾಂಸಮಾಡಿ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಜಾನುವಾರುಗಳನ್ನು ತುಂಬಿಸಿಕೊಂಡು ಸಾಗಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ನೀಡಿದಂತೆ ಠಾಣಾ ಸಿಬ್ಬಂದಿಗಳೊಂದಿಗೆ ಇಲಾಖಾ ಜೀಪ್ ನಂಬ್ರ KA-20-G-6006 ಹಾಗೂ ಖಾಸಗಿ ವಾಹನದಲ್ಲಿ ಠಾಣೆಯಿಂದ ಹೊರಟು ತೆಕ್ಕಟ್ಟೆ ಜಂಕ್ಷನ್ ಬಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಸ್ತೆಯ ಪೂರ್ವ ಪಥದ ರಸ್ತೆಯಲ್ಲಿ ಕೊಟೇಶ್ವರ ಕಡೆಯಿಂದ ಉಡುಪಿ ಮಂಗಳೂರು ಹೋಗುವ ಎಲ್ಲಾ ವಾಹನಗಳ ತಪಾಸಣೆ ಮಾಡುತ್ತಿರುವಾಗ ಸಮಯ ಸುಮಾರು ರಾತ್ರಿ 9:00 ಗಂಟೆಗೆ ಒಂದು ಬುಲೇರೋ ಪಿಕ್ಅಪ್ ವಾಹನ ನಂಬ್ರ KA-40-B-8708 ನೇ ವಾಹನದ ಚಾಲಕನು ತನ್ನ ವಾಹನವನ್ನು ನಮ್ಮಿಂದ ಸುಮಾರು 50 ಮೀಟರ್ ಹಿಂದೆ ನಿಲ್ಲಿಸಿದ್ದು ಸದ್ರಿ ವಾಹನದ ಮೇಲೆ ಸಂಶಯ ಬಂದಿದ್ದು, ಸಿಬ್ಬಂದಿಗಳೊಂದಿಗೆ ಸದ್ರಿ ವಾಹನವನ್ನು ತಪಾಸಣೆ ಮಾಡಲು ಹೊರಟಾಗ ವಾಹನದಲ್ಲಿದ್ದ 4 ವ್ಯಕ್ತಿಗಳು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಲು ಪ್ರಯತ್ನಿಸಿದ್ದು, ಸದ್ರಿಯವರುಗಳನ್ನು ಠಾಣಾ ಸಿಬ್ಬಂದಿಗಳ ಸಹಾಯದೊಂದಿಗೆ ಹಿಡಿದು ಪಿಕ್ಅಪ್ ವಾಹನವನ್ನು ಪರಿಶೀಲಿಸಿದಲ್ಲಿ, ವಾಹನದಲ್ಲಿ 4 ಜನ ಇದ್ದು, ಅವರುಗಳ ಹೆಸರು ವಿಳಾಸ ವಿಚಾರಿಸಿದಲ್ಲಿ 1) ಪುನಿತ್, (27) , . 2) ಗಣೇಶ (26) , ವಾಸ: ಬಾಗೆಪಲ್ಲಿ, ಕೋಲಾರ, 3) ಕೃಷ್ಣಪ್ಪ (40) , . ಸದ್ರಿ ಪಿಕ್ ಅಪ್ ವಾಹನದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಕತ್ತಿಗೆಗೆ ನೈಲಾನ್ ರೋಪ್ ಹಗ್ಗವನ್ನು ಕಟ್ಟಿ ಅವುಗಳಿಗೆ ಆಹಾರ ಮೇವು ನೀರು ನೀಡದೆ ಮಾಂಸಕ್ಕಾಗಿ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದು, 1) ಸದ್ರಿ ಬುಲೇರೋ ಪಿಕ್ಅಪ್ ವಾಹನ ನಂಬ್ರ KA-40-B-8708 ನೇಯದು ಗೂಡ್ಸ್ ವಾಹನವಾಗಿದ್ದು, ಇದರ ಅಂದಾಜು ಮೌಲ್ಯ ರೂಪಾಯಿ 2,00,000 ಆಗಿದ್ದು, ಅದರ ಓಳಗಡೆ 2) ಕಂಡು ಬಣ್ಣದ ದನ-1, ಇದರ ಅಂದಾಜು ಮೌಲ್ಯ 5,000/-, 3) ಕಪ್ಪು ಬಣ್ಣದ ದನ-1, ಇದರ ಅಂದಾಜು ಮೌಲ್ಯ 5,000/-, 4) ಕಪ್ಪು ಬಣ್ಣದ ದನ-1, ಇದರ ಅಂದಾಜು ಮೌಲ್ಯ 5,000/-, 5) ಕಪ್ಪು ಬಣ್ಣದ ದನ-1, ಇದರ ಅಂದಾಜು ಮೌಲ್ಯ 5,000/-, 6) ಕಂದು ಮಿಶ್ರಿತ ಕಪ್ಪು ದನ -1 ಅಂದಾಜು ಮೌಲ್ಯ 5,000/- 7) ಕಂದು ಬಣ್ಣದ 2 ತಿಂಗಳ ಹೆಣ್ಣು ಕರು-1, ಅಂದಾಜು ಮೌಲ್ಯ ರೂ. 2,000/- 8) ಕಂದು ಬಣ್ಣದ 2 ತಿಂಗಳ ಹೆಣ್ಣು ಕರು-1, ಅಂದಾಜು ಮೌಲ್ಯ ರೂ. 2,000/- 9) Vivo ಕಂಪನಿಯ ಮೊಬೈಲ್ -1 ಅಂದಾಜು ಮೌಲ್ಯ ರೂ 2,000/- 10) ಮೈಕ್ರೋಮ್ಯಾಕ್ಸ್ ಕಂಪನಿಯ ಕಪ್ಪು ಬಣ್ಣದ ಮೊಬೈಲ್ -1 ಅಂದಾಜು ಮೌಲ್ಯ 2000/- 11) ನಗದು ರೂ 1,850/- ಸದ್ರಿ ಸ್ವತ್ತುಗಳನ್ನು ಸ್ವಾದೀನ ಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಠಾಣಾ ಅಪರಾಧ ಕ್ರಮಾಂಕ 155/2026 ಕಲಂ: 303(3) ಜೊತೆಗೆ 3(5) ಬಿ.ಎನ್.ಎಸ್ ಕಲಂ 8.9.11 ಗೋ ಹತ್ಯೆ ತಡೆ ಹಾಗೂ ಜಾನುವಾರು ಸಂರಕ್ಷಣ ಕಾಯ್ದೆ 1964 ಮತ್ತು ಕಲಂ 11 (1)(ಡಿ) ಪ್ರಾಣಿ ಹಿಂಸೆ ತಡೆ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಪರಾಧ ಕ್ರಮಾಂಕ 155/2026

ಹಂಚಿಕೊಳ್ಳಿ: