ಕಡಬ: ಹಳೆಯ ವ್ಯವಹಾರದ ದ್ವೇಷದಲ್ಲಿ ವ್ಯಕ್ತಿಯ ಮೇಲೆ ಚೂರಿಯಿಂದ ಹಲ್ಲೆ ಮತ್ತು ಕೊಲೆ ಬೆದರಿಕೆ
ಕಡಬ ಪೇಟೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಚೂರಿಯಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಪ್ರಯತ್ನಿಸಿದ ಬಗ್ಗೆ ಶಾಫಿ ಎಂಬವರು ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಪ್ರಕಾರ, ದಿನಾಂಕ 06/11/2026 ರಂದು ಮಧ್...

ಕಡಬ ಪೇಟೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಚೂರಿಯಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಪ್ರಯತ್ನಿಸಿದ ಬಗ್ಗೆ ಶಾಫಿ ಎಂಬವರು ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನ ಪ್ರಕಾರ, ದಿನಾಂಕ 06/11/2026 ರಂದು ಮಧ್ಯಾಹ್ನ 2.10 ಗಂಟೆಗೆ ಶಾಫಿ ಅವರು ಕಡಬ ಪೇಟೆಯಲ್ಲಿದ್ದಾಗ ರಾಜಿಕ್ ಮತ್ತು ನವಾಜ್ ಎಂಬವರು ಅಕ್ಟಿವ ಬೈಕ್ ನಲ್ಲಿ ಬಂದು ಅವರನ್ನು ತಡೆದು ನಿಲ್ಲಿಸಿದ್ದಾರೆ. ಈ ಹಿಂದೆ ಶಾಫಿ ಅವರು ಉಪ್ಪಿನಂಗಡಿ ರವಿ ಭಟ್ ಅವರ ದೂರವಾಣಿ ಸಂಖ್ಯೆಯನ್ನು ಜಕಾರಿಯ ಎಂಬವರಿಗೆ ನೀಡಿದ್ದು, ಆ ಮೂಲಕ ಜಕಾರಿಯ ಅವರಿಗೆ ವ್ಯವಹಾರದಲ್ಲಿ ನಷ್ಟ ಉಂಟಾಗಿದೆ ಎಂದು ರಾಜಿಕ್ ಆರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ಬೈಕ್ ನಲ್ಲಿದ್ದ ನವಾಜ್ ಕೆಳಗಿಳಿದು ಶಾಫಿಯವರ ಕುತ್ತಿಗೆಯನ್ನು ಗಟ್ಟಿಯಾಗಿ ಹಿಡಿದು ಉಸಿರುಗಟ್ಟಿಸಿ ಕೊಲ್ಲಲು ಪ್ರಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನಂತರ ರಾಜಿಕ್ ಬೈಕ್ ಸೀಟ್ ಕೆಳಗಿನಿಂದ ಚೂರಿಯನ್ನು ತೆಗೆದು, ಶಾಫಿಯವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ತಿವಿಯಲು ಮುಂದಾಗಿದ್ದಾರೆ.
ಸ್ಥಳದಲ್ಲಿದ್ದ ಶರೀಪ್ ಮತ್ತು ಹರೀಶ್ ಎಂಬವರು ಓಡಿ ಬಂದಾಗ, ನವಾಜ್ ಮತ್ತು ರಾಜಿಕ್ ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ ಒಡ್ಡಿ ತಾವು ಬಂದಿದ್ದ ಕೆಎ-05-ಕೆಜೆ-1397 ಸಂಖ್ಯೆಯ ಅಕ್ಟಿವ ಬೈಕ್ ನಲ್ಲಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 131/2026 ರಡಿ ಕಲಂ 126, 352, 351(3), 109, r/w 3(5) ಬಿಎನ್ಎಸ್-2023 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ತನಿಖೆಯ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.



