ಕಾಪು: ಕಾಣೆ ಪ್ರಕರಣ
ಪಿರ್ಯಾದಿದಾರರಾದ ಮೊಹಮ್ಮದ್ ಇರ್ಷದ್ (35), ಮೂಡಬೆಟ್ಟು ಗ್ರಾಮ, ಕಾಪು ಇವರ ತಂದೆಯ ಅಕ್ಕನ ಮಗಳ ಮಗ ಮೊಹಮ್ಮದ್ ಹರ್ಷದ್ (24) ಹಾಗೂ ಅವರ ತಂದೆ ಮೊಹಮ್ಮದ್ ಹೈದರ್ ಮತ್ತು ತಾಯಿ ನೆಬಿಸಾ ರವರೊಂದಿಗೆ ವಾಸವಾಗಿದ್ದು, ಆಟೋರ...

ಪಿರ್ಯಾದಿದಾರರಾದ ಮೊಹಮ್ಮದ್ ಇರ್ಷದ್ (35), ಮೂಡಬೆಟ್ಟು ಗ್ರಾಮ, ಕಾಪು ಇವರ ತಂದೆಯ ಅಕ್ಕನ ಮಗಳ ಮಗ ಮೊಹಮ್ಮದ್ ಹರ್ಷದ್ (24) ಹಾಗೂ ಅವರ ತಂದೆ ಮೊಹಮ್ಮದ್ ಹೈದರ್ ಮತ್ತು ತಾಯಿ ನೆಬಿಸಾ ರವರೊಂದಿಗೆ ವಾಸವಾಗಿದ್ದು, ಆಟೋರಿಕ್ಷಾ ಚಾಲಕ ಕೆಲಸವನ್ನು ಮಾಡಿಕೊಂಡಿರುವುದಾಗಿದೆ. ಪಿರ್ಯಾದಿದಾರರು ಈ ದಿನ ಕೆಲಸಕ್ಕೆ ಹೋಗಿದ್ದು ಕೆಲಸ ಮುಗಿಸಿ ವಾಪಸ್ಸು ಸಂಜೆ 19:30 ಗಂಟೆಗೆ ಮನೆಗೆ ಬಂದಿದ್ದು ಮೊಹಮ್ಮದ್ ಹರ್ಷದ್ ನ ಚಿಕ್ಕಮ್ಮ ಸೇಲಿಕಾರವರ ಮೊಬೈಲ್ ನಂಬ್ರಗೆ ಮೊಹಮ್ಮದ್ ಹರ್ಷದ್ ರವರು ಎಲ್ಲಿವೋ ಹೋಗುತ್ತಿರುವುದಾಗಿ ಮೇಸೆಜ್ ಕಳುಹಿಸಿದ್ದು , ಪಿರ್ಯಾದಿದಾರರು ಆತನಿಗೆ ಕರೆ ಮಾಡಿ ವಿಚಾರಿಸಿದಲ್ಲಿ ತಾನು ತುಂಬಾ ಸಾಲ ಮಾಡಿದ್ದು ತನ್ನಿಂದ ಮನೆಯವರಿಗೆ ತೊಂದರೆಯಾಗಿದೆ ಎಂದು ತಾನು ಎಲ್ಲಿಯೋ ದೂರದಲ್ಲಿರುವುದಾಗಿ ತಿಳಿಸಿದ್ದು. ಪಿರ್ಯಾದಿದಾರರು ಆತನಿಗೆ ಕರೆ ಮಾಡಿ ಏನು ಆಗುವುದಿಲ್ಲ ಹೆದರಬೇಡವೆಂದು ದೈರ್ಯ ತುಂಬಿ ಮನೆಗೆ ಬಾ ಎಂದು ಹೇಳಿದರು ಸಹ ಮನೆಗೆ ಬಂದಿರುವುದಿಲ್ಲ. ಆತನು ಚಲಾಯಿಸುತ್ತಿದ್ದ ಆಟೋ ರಿಕ್ಷಾವನ್ನು ಮನೆಯ ಬಳಿ ನಿಲ್ಲಿಸಿ ಎಲ್ಲಿಯೋ ಹೋಗಿರುತ್ತಾನೆ . ದಿನಾಂಕ 30/10/2026 ರಂದು ಮಧ್ಯಾಹ್ನ 12:30 ಗಂಟೆಗೆ ಮನೆಯಿಂದ ಹೋಗಿದ್ದು ರಾತ್ರಿ ಸಮಯ 21:30 ಗಂಟೆಯಾದರು ಮನೆಗೆ ಬಂದಿರುವುದಿಲ್ಲ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 143/2026 ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಾಪು ಪೊಲೀಸ್ ಠಾಣೆ — ಅಪರಾಧ ಕ್ರಮಾಂಕ 143/2026




