ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಅಪರಾಧ

ಹುಣಸೂರಿನ ವಿನೋಬ ಕಾಲೋನಿಯಲ್ಲಿ ಪತಿಯನ್ನು ಕೊಲೆಗೈದ ಪತ್ನಿ ಮತ್ತು ಪ್ರಿಯಕರ ಬಂಧನ

ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಯೂಟ್ಯೂಬ್ ನೋಡಿ ದತ್ತೂರಿ ಬೀಜದ ಪುಡಿ ಬೆರೆಸಿ ಪತಿಯನ್ನು ಕೊಲೆ ಮಾಡಿದ್ದ ಪತ್ನಿ ಪವಿತ್ರ ಹಾಗೂ ಆಕೆಯ ಪ್ರಿಯಕರ ಸುನೀಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇಡ್ಲಿಯಲ್ಲಿ ವಿಷ ಬೆರೆಸಿ, ಬಳ...

· ಮೈಸೂರು
ಪ್ರಿಯಕರನ ಜೊತೆ ಸೇರಿ ಇಡ್ಲಿಗೆ ದತ್ತೂರಿ ಬೀಜ ಹಾಕಿ ಪತಿಯ ಕೊಲೆಗೆ ಯತ್ನ: ಇಡ್ಲಿ ತಿಂದರೂ ಸಾಯದಿದ್ದಾಗ ಪತ್ನಿ ಮಾಡಿದ್ದೇನು ನೋಡಿ
ಹಂಚಿಕೊಳ್ಳಿ:

ಹುಣಸೂರು ತಾಲೂಕಿನ ವಿನೋಬ ಕಾಲೋನಿಯಲ್ಲಿ ಗಾರೆ ಕೆಲಸಗಾರ ರಾಮಪ್ರಸಾದ್ ಎಂಬುವವರನ್ನು ಅವರ ಪತ್ನಿ ಪವಿತ್ರಾ ಮತ್ತು ಆಕೆಯ ಪ್ರಿಯಕರ ಸುನೀಲ್ ಸೇರಿ ಹತ್ಯೆ ಮಾಡಿದ್ದಾರೆ. ಪವಿತ್ರಾ ತನ್ನ ಪತಿಗೆ ದತ್ತೂರಿ ಬೀಜ ಬೆರೆಸಿದ ಇಡ್ಲಿ ತಿನ್ನಿಸಿದರೂ ಆತ ಸಾಯದಿದ್ದಾಗ, ಪ್ರಿಯಕರನ ಜೊತೆಗೂಡಿ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಘಟನೆಯ ನಂತರ ಪತಿ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ ಎಂದು ಸುಳ್ಳು ಕಥೆ ಸೃಷ್ಟಿಸಿ ಅಂತ್ಯಕ್ರಿಯೆ ನಡೆಸಲಾಗಿತ್ತು. ಆದರೆ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಮೃತನ ಸಹೋದರ ಚಂದ್ರಹಾಸ ಪೊಲೀಸರಿಗೆ ದೂರು ನೀಡಿದಾಗ ಪ್ರಕರಣದ ಸತ್ಯಾಂಶ ಬಯಲಾಗಿದೆ. ಆರೋಪಿಗಳಾದ ಪವಿತ್ರಾ ಮತ್ತು ಸುನೀಲ್ ಅವರನ್ನು ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹಂಚಿಕೊಳ್ಳಿ: