ಬೆಂಗಳೂರು: 7 ಮಂದಿ ಹತ್ಯೆ ಪ್ರಕರಣದಲ್ಲಿ ಆರೋಪಿಯ ಕೃತ್ಯ ಬಯಲು ಮಾಡಿದ ಆಡಿಯೋ ವೈರಲ್
ಬೆಂಗಳೂರಿನ ರಾಜಾಜಿನಗರದ ಏಳು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕ ಯತಿನ್ ಸಂಬಂಧಿಕರೊಂದಿಗೆ ಮಾತನಾಡಿರುವ ಆಡಿಯೋ ಬಹಿರಂಗವಾಗಿದೆ. ಅಪ್ಪ-ಅಮ್ಮ ಬಸ್‌ನಲ್ಲಿದ್ದಾರೆ, ಟ್ರಿಪ್‌ಗೆ ಬಂದಿದ್ದೇವೆ ಎಂದು ಬಾಲಕನಿಂದ ಹೇಳಿಸಿದ...

ಬೆಂಗಳೂರಿನ ರಾಜಾಜಿನಗರದಲ್ಲಿ ಏಳು ಮಂದಿಯನ್ನು ಹತ್ಯೆಗೈದ ಆರೋಪಿ ಇಂದುಶೇಖರ್, ಸಂತ್ರಸ್ತರ ಮೊಬೈಲ್ ಬಳಸಿ ಸಂಬಂಧಿಕರನ್ನು ವಂಚಿಸಿದ್ದಾನೆ. ಮೃತ ಕುಟುಂಬದ ಸದಸ್ಯರಾದ ಪುನೀತ್ ಮತ್ತು ಯತಿನ್ ಅವರಿಂದ ಕರೆಗಳಿಗೆ ಉತ್ತರ ಕೊಡಿಸಿ, ಅವರೆಲ್ಲರೂ ಪ್ರವಾಸದಲ್ಲಿದ್ದಾರೆ ಎಂದು ಸುಳ್ಳು ಹೇಳಿಸಿದ್ದಾನೆ. ಯತಿನ್ ತನ್ನ ಸಂಬಂಧಿಕರೊಂದಿಗೆ ಮಾತನಾಡಿದ ಆಡಿಯೋ ತುಣುಕು ಇದೀಗ ಬಹಿರಂಗವಾಗಿದ್ದು, ಅದರಲ್ಲಿ ಬಾಲಕ ಅಪ್ಪ-ಅಮ್ಮ ಬಸ್ಸಿನಲ್ಲಿದ್ದಾರೆ ಎಂದು ತಿಳಿಸಿದ್ದಾನೆ. ಈ ಆಡಿಯೋವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದಾರೆ.




