ಶಾರ್ಕ್ ಟ್ಯಾಂಕ್ USAನಲ್ಲಿ ಮಡಚುವ ಚಮಚದ ಐಡಿಯಾಗೆ ರಾಹುಲ್ ಅಗರ್ವಾಲ್ ಪಡೆದರು ₹2.9 ಕೋಟಿ ಹೂಡಿಕೆ
ಭಾರತೀಯ ವಿನ್ಯಾಸಕಾರ ರಾಹುಲ್ ಅಗರ್ವಾಲ್ ಅವರು ಆರು ಅಳತೆ ಚಮಚಗಳ ಬದಲಿಗೆ ಬಳಸಬಹುದಾದ ಎರಡು ಮಡಚುವ ಚಮಚಗಳನ್ನು ರೂಪಿಸಿದ್ದಾರೆ. ಅವರ Polygons ಉತ್ಪನ್ನಕ್ಕೆ ‘ಶಾರ್ಕ್ ಟ್ಯಾಂಕ್ USA’ನಲ್ಲಿ ಲೋರಿ ಗ್ರೈನರ್ ಮತ್ತು ಮಿಂಡ...

ಭಾರತೀಯ ಮೂಲದ ವಿನ್ಯಾಸಕಾರ ರಾಹುಲ್ ಅಗರ್ವಾಲ್ ಅವರು ಅಮೆರಿಕದ ಶಾರ್ಕ್ ಟ್ಯಾಂಕ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಮಡಚಬಹುದಾದ ಅಳತೆ ಚಮಚದ ವಿನ್ಯಾಸಕ್ಕೆ 3.5 ಲಕ್ಷ ಡಾಲರ್ ಹೂಡಿಕೆ ಗಿಟ್ಟಿಸಿಕೊಂಡಿದ್ದಾರೆ. ಒರಿಗಾಮಿ ಕಲೆಯಿಂದ ಪ್ರೇರಿತವಾದ ಈ ಪಾಲಿಗಾನ್ಸ್ ಉತ್ಪನ್ನವು ಅಡುಗೆ ಮನೆಯಲ್ಲಿ ಜಾಗ ಉಳಿಸುವುದಲ್ಲದೆ, ನಿಖರ ಅಳತೆಗೆ ನೆರವಾಗುತ್ತದೆ. ಅಹಮದಾಬಾದ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಈ ಐಡಿಯಾ ರೂಪಿಸಿದ್ದ ರಾಹುಲ್, ಹಲವು ವರ್ಷಗಳ ಶ್ರಮದ ನಂತರ ಇದೀಗ ಜಾಗತಿಕ ಮನ್ನಣೆ ಪಡೆದಿದ್ದಾರೆ. ಲೋರಿ ಗ್ರೈನರ್ ಮತ್ತು ಮಿಂಡಿ ಕಾಲಿಂಗ್ ಅವರು ಈ ಸ್ಟಾರ್ಟ್ ಅಪ್‌ನಲ್ಲಿ ಹೂಡಿಕೆ ಮಾಡಲು ಒಪ್ಪಂದ ಮಾಡಿಕೊಂಡಿದ್ದಾರೆ.




