ದೀಪಾವಳಿ ಹಬ್ಬದ ಹೊತ್ತಿಗೆ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆ
ದಸರಾ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಲಿದೆ. ಇದೀಗ ಆರ್ಥಿಕ ತಜ್ಞರ ತಂಡ ಗುಡ್ ನ್ಯೂಸ್ ನೀಡಿದೆ. ದೀಪಾವಳಿಗೆ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಲಿದೆ ಎಂದು ಸೂಚಿಸಿದೆ...

ದೀಪಾವಳಿ ಮತ್ತು ದಾಂತೇರಸ್ ಹಬ್ಬಗಳ ಸಂದರ್ಭದಲ್ಲಿ ಚಿನ್ನದ ಬೆಲೆ ಗಣನೀಯವಾಗಿ ತಗ್ಗಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಕ್ಟೋಬರ್ 21ರಂದು ಎಂಸಿಎಕ್ಸ್ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 1,46,482 ರೂಪಾಯಿಗೆ ಇಳಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಚಿನ್ನದ ದರ ಶೇಕಡಾ 0.3ರಷ್ಟು ಕುಸಿತ ಕಂಡಿದ್ದು, ಪ್ರತಿ ಔನ್ಸ್‌ಗೆ 4,128.92 ಡಾಲರ್ ಆಗಿದೆ. ಹೂಡಿಕೆದಾರರು ಚಿನ್ನದ ಬದಲು ಇತರ ಹೂಡಿಕೆಗಳತ್ತ ಆಸಕ್ತಿ ತೋರುತ್ತಿರುವುದು ಮತ್ತು ಹಣದುಬ್ಬರ ನಿಯಂತ್ರಣದ ಕ್ರಮಗಳು ಬೆಲೆ ಇಳಿಕೆಗೆ ಕಾರಣವಾಗಿವೆ ಎಂದು ತಜ್ಞರು ತಿಳಿಸಿದ್ದಾರೆ.




