ಸಾಗರ: ಬನ್ನಿ ಮುಡಿಯುವ ಶಾಸ್ತ್ರದ ವೇಳೆ ತಹಶೀಲ್ದಾರ್ ಡಾ.ಪ್ರತಿಭಾ ಭಾವುಕ
ಮುಂದಿನ ವರ್ಷದಿಂದ ಸಾಗರದಲ್ಲಿಯೂ ವಿಜೃಂಭಣೆಯ ದಸರಾ ಆಚರಿಸಲು ಶಾಸಕ ಗೋಪಾಲಕೃಷ್ಣ ಬೇಳೂರು ಚಿಂತನೆ ನಡೆಸಿದ್ದಾರೆ. ಆದರೆ, ಈ ಬಾರಿಯ ಬನ್ನಿ ಮುಡಿಯುವ ಶಾಸ್ತ್ರವನ್ನು ತಹಶೀಲ್ದಾರ್ ಬದಲಿಗೆ ಉಪವಿಭಾಗಾಧಿಕಾರಿ ನೆರವೇರಿಸಿದ್ದ...

ಸಾಗರದ ಪ್ರವಾಸಿ ಮಂದಿರದಲ್ಲಿ ನಡೆದ ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಡಾ.ಪ್ರತಿಭಾ ಅವರು ಭಾಗವಹಿಸದೆ ಕಣ್ಣೀರು ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಶಾಸ್ತ್ರವನ್ನು ಈ ಬಾರಿ ಉಪವಿಭಾಗಾಧಿಕಾರಿ ವೀರೇಶಕುಮಾರ್ ನೆರವೇರಿಸಿದ್ದು ಸ್ಥಳೀಯವಾಗಿ ಚರ್ಚೆಗೆ ಗ್ರಾಸವಾಗಿದೆ. ಮಹಿಳಾ ತಹಶೀಲ್ದಾರ್ ಸೀಮೋಲ್ಲಂಘನೆ ಮಾಡಬಾರದು ಎಂಬ ವಾದ ಕೇಳಿಬಂದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಇದೇ ವೇಳೆ ಶಾಸಕ ಗೋಪಾಲಕೃಷ್ಣ ಬೇಳೂರು ಮುಂದಿನ ವರ್ಷದಿಂದ ಸಾಗರದಲ್ಲಿ ದಸರಾ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ಇಂಗಿತ ವ್ಯಕ್ತಪಡಿಸಿದರು.




