ನವದೆಹಲಿ: 2026-27ರಲ್ಲಿ ಸಕ್ಕರೆ ಆಧಾರಿತ ಎಥೆನಾಲ್ ಖರೀದಿಯನ್ನು ಸ್ಥಗಿತಗೊಳಿಸಿದ ಕೇಂದ್ರ
ಮಳೆ ಅಭಾವ ಹಾಗೂ ಸಕ್ಕರೆ ಕೊರತೆಯ ಆತಂಕದಿಂದಾಗಿ 2026-27ನೇ ಸಾಲಿನಲ್ಲಿ ಸಕ್ಕರೆ ಆಧಾರಿತ ಎಥೆನಾಲ್ ಖರೀದಿಸದಿರಲು ತೈಲ ಕಂಪನಿಗಳು ನಿರ್ಧರಿಸಿವೆ. ಬದಲಾಗಿ ಮೆಕ್ಕೆಜೋಳ, ಅಕ್ಕಿ ಮತ್ತು ಸಿ-ದರ್ಜೆಯ ಕಾಕಂಬಿಯಿಂದ ಉತ್ಪಾದಿಸಿ...

ದೇಶದಲ್ಲಿ ಸಕ್ಕರೆ ಕೊರತೆಯನ್ನು ನೀಗಿಸಲು ಮತ್ತು ಮಳೆಯ ಕೊರತೆಯ ಪರಿಣಾಮವನ್ನು ಸರಿದೂಗಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. 2026-27ನೇ ಸಾಲಿನಲ್ಲಿ ಸಕ್ಕರೆ, ಕಬ್ಬಿನ ರಸ ಹಾಗೂ ಬಿ-ಹೆವಿ ಮೊಲಾಸಿಸ್‌ನಿಂದ ತಯಾರಾಗುವ ಎಥೆನಾಲ್ ಖರೀದಿಸುವುದಿಲ್ಲ ಎಂದು ತೈಲ ಕಂಪನಿಗಳು ಸ್ಪಷ್ಟಪಡಿಸಿವೆ. ಬದಲಾಗಿ ಮೆಕ್ಕೆಜೋಳ ಮತ್ತು ಅಕ್ಕಿ ಆಧಾರಿತ ಎಥೆನಾಲ್ ಬಳಕೆಗೆ ಆದ್ಯತೆ ನೀಡಲಾಗಿದ್ದು, ಈ ಸಂಬಂಧ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ 11 ಶತಕೋಟಿ ಲೀಟರ್ ಎಥೆನಾಲ್ ಖರೀದಿಗೆ ಟೆಂಡರ್ ಕರೆದಿದೆ. ಇದೇ ವೇಳೆ ಮೆಕ್ಕೆಜೋಳ ಆಧಾರಿತ ಎಥೆನಾಲ್ ಮೇಲಿನ ಪ್ರೋತ್ಸಾಹಧನವನ್ನು ಲೀಟರ್‌ಗೆ 5.79 ರೂಪಾಯಿಯಿಂದ 2.79 ರೂಪಾಯಿಗೆ ಇಳಿಕೆ ಮಾಡಲಾಗಿದೆ.




