ಬೆಂಗಳೂರಿನಲ್ಲಿ ಫುಡ್ ಡೆಲಿವರಿ ಸೇವೆ ಆರಂಭಿಸಲು ಸಿದ್ಧವಾದ ಇ-ಕಾಮರ್ಸ್ ದೈತ್ಯ ಫ್ಲಿಪ್ಕಾರ್ಟ್
ಇ-ಕಾಮರ್ಸ್ ದೈತ್ಯ ಫ್ಲಿಪ್ಕಾರ್ಟ್ 'ಈಟ್-ಇನ್ ಬೈ ಮಿನಿಟ್ಸ್' ಹೆಸರಿನಲ್ಲಿ ಆನ್ಲೈನ್ ಫುಡ್ ಡೆಲಿವರಿ ಸೇವೆ ಆರಂಭಿಸಲು ಸಜ್ಜಾಗಿದೆ. ಸದ್ಯ ಬೆಂಗಳೂರಿನಲ್ಲಿ ತನ್ನ 8,000 ಉದ್ಯೋಗಿಗಳಿಗೆ ಈ ಸೇವೆಯನ್ನು ಪರೀಕ್ಷಿಸುತ್ತಿದ್...

ಆನ್ಲೈನ್ ಫುಡ್ ಡೆಲಿವರಿ ವಲಯಕ್ಕೆ ಪ್ರವೇಶಿಸಲು ಫ್ಲಿಪ್ಕಾರ್ಟ್ ಸಜ್ಜಾಗಿದೆ. ಈಟ್-ಇನ್ ಬೈ ಮಿನಿಟ್ಸ್ ಹೆಸರಿನ ಈ ಸೇವೆಯನ್ನು ಬೆಂಗಳೂರಿನಲ್ಲಿ ಕಂಪನಿ ಈಗಾಗಲೇ ತನ್ನ 8,000 ಉದ್ಯೋಗಿಗಳ ಮೂಲಕ ಪರೀಕ್ಷಿಸುತ್ತಿದೆ. ಇ-ಕಾರ್ಟ್ ಲಾಜಿಸ್ಟಿಕ್ಸ್ ನೆಟ್ವರ್ಕ್ ಬಳಸಿಕೊಂಡು ಈ ಸೇವೆಯನ್ನು ನೀಡಲು ಉದ್ದೇಶಿಸಿದ್ದು, ಇದೇ ತಿಂಗಳಾಂತ್ಯಕ್ಕೆ ಅಧಿಕೃತವಾಗಿ ಲಾಂಚ್ ಮಾಡುವ ಸಾಧ್ಯತೆಯಿದೆ. ಒಎನ್ಡಿಸಿ ಮತ್ತು ನೇರ ಒಪ್ಪಂದ ಮಾಡಿಕೊಂಡ ರೆಸ್ಟೋರೆಂಟ್ಗಳ ಮೂಲಕ ಗ್ರಾಹಕರಿಗೆ ಆಹಾರ ಪೂರೈಕೆ ಮಾಡಲಾಗುವುದು. ಈ ಮೂಲಕ ಸ್ವಿಗ್ಗಿ ಮತ್ತು ಜೊಮ್ಯಾಟೊ ಕಂಪನಿಗಳಿಗೆ ಫ್ಲಿಪ್ಕಾರ್ಟ್ ತೀವ್ರ ಪೈಪೋಟಿ ನೀಡಲಿದೆ.




