ಮನೆ ಬದಲಾಯಿಸುವಾಗ ಎಲ್ ಪಿಜಿ ಗ್ಯಾಸ್ ಕನೆಕ್ಷನ್ ವರ್ಗಾವಣೆ ಮಾಡುವುದು ಹೇಗೆ
ಉದ್ಯೋಗ, ಮಕ್ಕಳ ಓದು ಅಥವಾ ಬೇರೆ ಕಾರಣಕ್ಕೆ ಮನೆ ಬದಲಾಯಿಸಿದಾಗ ಮೊದಲು ನೆನಪಾಗುವುದು ಎಲ್ ಪಿಜಿ ಸಿಲಿಂಡರ್. ಹೊಸ ಊರಿನಲ್ಲಿ ಹೊಸ ಗ್ಯಾಸ್ ಕನೆಕ್ಷನ್ ತೆಗೆದುಕೊಳ್ಳಬೇಕಾ ಅಥವಾ ಹಳೆಯ ಕನೆಕ್ಷನ್ ವರ್ಗಾವಣೆ ಮಾಡಿಕೊಳ್ಳಬಹುದ...

ವಾಸದ ಸ್ಥಳ ಬದಲಾದಾಗ ಹಳೆಯ ಗ್ಯಾಸ್ ಕನೆಕ್ಷನ್ ರದ್ದುಗೊಳಿಸದೆ ಹೊಸ ವಿಳಾಸಕ್ಕೆ ವರ್ಗಾಯಿಸಿಕೊಳ್ಳಬಹುದು. ಒಂದೇ ಏರಿಯಾದಲ್ಲಿ ಮನೆ ಬದಲಿಸಿದರೆ ಏಜೆನ್ಸಿಗೆ ವಿಳಾಸದ ಪುರಾವೆ ನೀಡಿದರೆ ಸಾಕು, ಆದರೆ ಬೇರೆ ಊರಿಗೆ ತೆರಳುವಾಗ ಟರ್ಮಿನೇಷನ್ ವೋಚರ್ ಪಡೆದು ಹೊಸ ಏಜೆನ್ಸಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಇಂಡೇನ್, ಭಾರತ್ ಗ್ಯಾಸ್ ಮತ್ತು ಎಚ್ ಪಿ ಗ್ಯಾಸ್ ಕಂಪನಿಗಳು ಆನ್ ಲೈನ್ ಮೂಲಕವೂ ಈ ಸೌಲಭ್ಯ ಒದಗಿಸುತ್ತವೆ. ವರ್ಗಾವಣೆಗೆ ಆಧಾರ್ ಕಾರ್ಡ್, ವಿಳಾಸದ ಪುರಾವೆ, ಗ್ಯಾಸ್ ಪುಸ್ತಕ ಹಾಗೂ ಫೋಟೋಗಳ ಅಗತ್ಯವಿದ್ದು, ಮನೆ ಬದಲಾಯಿಸುವ ಎರಡು ವಾರಗಳ ಮುನ್ನವೇ ಅರ್ಜಿ ಸಲ್ಲಿಸುವುದು ಸೂಕ್ತ.




