ನವದೆಹಲಿ: ಓಲಾ ಕಂಪನಿಗೆ 10 ಲಕ್ಷ ರೂ. ದಂಡ ವಿಧಿಸಿದ ಸಿಸಿಪಿಎ
ನವದೆಹಲಿ: ಪ್ರಿ-ರೈಡ್ ಟಿಪ್ಪಿಂಗ್ ವೈಶಿಷ್ಟ್ಯದ ಮೂಲಕ ಗ್ರಾಹಕರನ್ನು ದಾರಿ ತಪ್ಪಿಸುತ್ತಿದ್ದ ಓಲಾ ಕಂಪನಿಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ(CCPA) 10 ಲಕ್ಷ ರೂ. ದಂಡ ವಿಧಿಸಿದೆ.ಗ್ರಾಹಕ ವ್ಯವಹಾರಗಳು, ಆಹಾರ ಮತ್ತು...

ಪ್ರಯಾಣಕ್ಕೂ ಮುನ್ನ ಗ್ರಾಹಕರಿಂದ ಟಿಪ್ಸ್ ಪಡೆಯುತ್ತಿದ್ದ ಓಲಾ ಅಪ್ಲಿಕೇಶನ್‌ನ ಕ್ರಮಕ್ಕೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ರೀತಿಯಾಗಿ ಗ್ರಾಹಕರನ್ನು ದಾರಿ ತಪ್ಪಿಸುತ್ತಿರುವ ಮಾತೃಸಂಸ್ಥೆ ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ಗೆ 10 ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಲಾಗಿದೆ. ರೈಡ್ ಪೂರ್ಣಗೊಂಡ ನಂತರವಷ್ಟೇ ಟಿಪ್ ನೀಡಲು ಅವಕಾಶವಿರುವಾಗ, ಮುಂಗಡವಾಗಿ ಹಣ ಪಡೆಯುವುದು ನಿಯಮಬಾಹಿರ ಎಂದು ಪ್ರಾಧಿಕಾರ ತಿಳಿಸಿದೆ. ಅಪ್ಲಿಕೇಶನ್‌ನಲ್ಲಿರುವ ಇಂತಹ ಎಲ್ಲಾ ಆಯ್ಕೆಗಳನ್ನು ತಕ್ಷಣವೇ ತೆಗೆದುಹಾಕುವಂತೆ ಕಂಪನಿಗೆ ಸೂಚನೆ ನೀಡಲಾಗಿದ್ದು, ಹದಿನೈದು ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆ ಆದೇಶಿಸಲಾಗಿದೆ.




