ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ವಿಶ್ವ

ವಾಷಿಂಗ್ಟನ್: ಶ್ವೇತಭವನದ ಬಳಿ 3 ಬಂದೂಕುಗಳೊಂದಿಗೆ ವೆನೆಜುವೆಲಾದ ವ್ಯಕ್ತಿ ಬಂಧನ

ನ್ಯೂಯಾರ್ಕ್: ಅಮೆರಿಕದ ಶ್ವೇತಭವನದ ಬಳಿ ವ್ಯಕ್ತಿಯೊಬ್ಬನ ಕಾರಿನಲ್ಲಿ ಮೂರು ಬಂದೂಕುಗಳು ಮತ್ತು ಡಜನ್‌ಗಟ್ಟಲೆ ಗುಂಡುಗಳು ಪತ್ತೆಯಾದ ನಂತರ ಆತನನ್ನು ಬಂಧಿಸಲಾಗಿದೆ. 'ನನ್ನ ತಲೆಯೊಳಗಿನ ಧ್ವನಿಗಳು ವಾಷಿಂಗ್ಟನ್‌ಗೆ ತೆರಳಿ...

'ನನ್ನ ತಲೆಯೊಳಗಿನ ಧ್ವನಿಗಳು ಟ್ರಂಪ್‌ ಕೊಲ್ಲುವಂತೆ ಹೇಳಿದವು: ಶ್ವೇತಭವನದ ಬಳಿ 3 ಗನ್ ಗಳೊಂದಿಗೆ
ಬಂಧಿಸಲ್ಪಟ್ಟ ವೆನೆಜುವೆಲಾದ ವ್ಯಕ್ತಿ ಸ್ಫೋಟಕ ಹೇಳಿಕೆ!
ಹಂಚಿಕೊಳ್ಳಿ:

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಲು ತಲೆಯೊಳಗಿನ ಧ್ವನಿಗಳು ನಿರ್ದೇಶಿಸಿದವು ಎಂದು ಆರೋಪಿಸಿ ರಾನಿ ಯೋರ್ಡ್ರಿಕ್ಸ್ ಗ್ವಾನಿಪಾ ಕ್ರಿನೋಸ್ ಎಂಬಾತನನ್ನು ಬಂಧಿಸಲಾಗಿದೆ. ವಾಷಿಂಗ್ಟನ್‌ನಲ್ಲಿರುವ ಶ್ವೇತಭವನದ ಸಮೀಪ ಅನುಮಾನಾಸ್ಪದವಾಗಿ ಕಾರಿನಲ್ಲಿ ಕುಳಿತಿದ್ದ ಈತನನ್ನು ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಪರಿಶೀಲನೆ ನಡೆಸಿದಾಗ ಕಳುವಾದ ಕಾರಿನಲ್ಲಿ ಮೂರು ಬಂದೂಕುಗಳು ಹಾಗೂ ಹೆಚ್ಚಿನ ಸಂಖ್ಯೆಯ ಗುಂಡುಗಳು ಪತ್ತೆಯಾಗಿವೆ. ವೆನೆಜುವೆಲಾದ ಈ ಅಕ್ರಮ ವಲಸಿಗನು 2024ರ ಮಾರ್ಚ್‌ನಲ್ಲಿ ಟೆಕ್ಸಾಸ್ ಮೂಲಕ ಅಮೆರಿಕ ಪ್ರವೇಶಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಂಚಿಕೊಳ್ಳಿ: