ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ನಾಗಾ ಸಮುದಾಯದ 39 ಜನರ ಅವಶೇಷಗಳು ಭಾರತಕ್ಕೆ ವಾಪಸ್
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ, ಒಂದು ಶತಮಾನಕ್ಕೂ ಹೆಚ್ಚು ಕಾಲ ತನ್ನ 'ಪಿಟ್ ರಿವರ್ಸ್ ಮ್ಯೂಸಿಯಂ'ನಲ್ಲಿ (Pitt Rivers Museum) ಇರಿಸಿಕೊಂಡಿದ್ದ ನಾಗಾ ಸಮುದಾಯದ 39 ವ್ಯಕ್ತಿಗಳ ಅವಶೇಷಗಳನ್ನು, ಐತಿಹಾಸಿಕ ಮರಳಿಸುವಿಕೆ...

ಒಂದು ಶತಮಾನಕ್ಕೂ ಅಧಿಕ ಸಮಯದಿಂದ ಲಂಡನ್‌ನ ಪಿಟ್ ರಿವರ್ಸ್ ಮ್ಯೂಸಿಯಂನಲ್ಲಿ ಸಂರಕ್ಷಿಸಲಾಗಿದ್ದ ನಾಗಾ ಸಮುದಾಯದ 39 ವ್ಯಕ್ತಿಗಳ ಅವಶೇಷಗಳನ್ನು ಭಾರತಕ್ಕೆ ಹಸ್ತಾಂತರಿಸಲಾಗಿದೆ. ಸೋಮವಾರ ನಡೆದ ಸಮಾರಂಭದಲ್ಲಿ ವಸ್ತುಸಂಗ್ರಹಾಲಯದ ನಿರ್ದೇಶಕಿ ಪ್ರೊಫೆಸರ್ ಲಾರಾ ವ್ಯಾನ್ ಬ್ರೋಕ್‌ಹೋವನ್ ಮತ್ತು ಫೋರಮ್ ಫಾರ್ ನಾಗಾ ರಿಕನ್ಸಿಲಿಯೇಶನ್ ಪ್ರತಿನಿಧಿಗಳು ದಾಖಲೆಗಳಿಗೆ ಸಹಿ ಹಾಕುವ ಮೂಲಕ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು. ಈ ಅವಶೇಷಗಳನ್ನು ನಾಗಾಲ್ಯಾಂಡ್‌ಗೆ ಕೊಂಡೊಯ್ಯಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಇದು ವಸಾಹತುಶಾಹಿ ಕಾಲದ ನೋವನ್ನು ಮರೆಸಿ ಶಾಂತಿ ಮತ್ತು ಸಾಮರಸ್ಯ ಮೂಡಿಸುವ ಪ್ರಯತ್ನವಾಗಿದೆ ಎಂದು ಆಕ್ಸ್‌ಫರ್ಡ್ ಉಪಕುಲಪತಿ ಪ್ರೊಫೆಸರ್ ಐರೀನ್ ಟ್ರೇಸಿ ಅಭಿಪ್ರಾಯಪಟ್ಟಿದ್ದಾರೆ.




