ಮುಖ್ಯ ವಿಷಯಕ್ಕೆ ಹೋಗಿ
The Karnataka Today
13 Oct
ಸುದ್ದಿ
ವಿಶ್ವ

ಪಾಕಿಸ್ತಾನ: ಕ್ವೆಟ್ಟಾ ಬಳಿ ಸೇನಾ ತರಬೇತಿ ವಿಮಾನ ಪತನ, ಇಬ್ಬರು ಪೈಲಟ್‌ಗಳ ಸಾವು

ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾ ಬಳಿ ಪಾಕ್ ಸೇನೆಯ ತರಬೇತಿ ವಿಮಾನವೊಂದು ಪತನಗೊಂಡು ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ. ಮೃತ ಪೈಲಟ್‌ಗಳನ್ನು ತರಬೇತುದಾರ ಇನ್‌ಸ್ಟ್ರಕ್ಟರ್ ಮೇಜರ್ ಹುಸ್ನೇನ್...

ಹಂಚಿಕೊಳ್ಳಿ:

ಇಸ್ಲಾಮಾಬಾದ್, ಅಕ್ಟೋಬರ್ 12: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಕ್ವೆಟ್ಟಾ ಸಮೀಪ ಪಾಕ್ ಸೇನೆಗೆ ಸೇರಿದ ತರಬೇತಿ ವಿಮಾನವೊಂದು ಪತನವಾಗಿದೆ. ಈ ಅವಘಡದಲ್ಲಿ ಇಬ್ಬರು ಹಿರಿಯ ಪೈಲಟ್‌ಗಳು ಮೃತಪಟ್ಟಿರುವ ವಿಷಯವನ್ನು ಪಾಕಿಸ್ತಾನ ಸೇನೆಯ ವಕ್ತಾರರು ದೃಢಪಡಿಸಿದ್ದಾರೆ. ಮೃತಪಟ್ಟವರನ್ನು ತರಬೇತುದಾರ ಮೇಜರ್ ಹುಸ್ನೇನ್ ಶಹಜಾದ್ ಹುಮಾಯೂನ್ ಮತ್ತು ತರಬೇತಿ ಪಡೆಯುತ್ತಿದ್ದ ಪೈಲಟ್ ಕ್ಯಾಪ್ಟನ್ ಅಬ್ದುಲ್ ಸಮದ್ ಎಂದು ಹೆಸರಿಸಲಾಗಿದೆ.

ಕ್ವೆಟ್ಟಾ ಜಿಲ್ಲೆಯ ನವಾನ್ ಕಿಲ್ಲಿ ಎಂಬಲ್ಲಿ ಪಾಕಿಸ್ತಾನ ಆರ್ಮಿ ಏವಿಯೇಷನ್‌ನ ಮುಶಕ್ ಮಾದರಿಯ ತರಬೇತಿ ವಿಮಾನವು ನಿಯಮಿತ ಹಾರಾಟ ನಡೆಸುತ್ತಿದ್ದಾಗ, ಮಧ್ಯಾಹ್ನದ ಹೊತ್ತಿಗೆ ತಾಂತ್ರಿಕ ದೋಷವುಂಟಾಗಿ ನೆಲಕ್ಕೆ ಬಿದ್ದಿದೆ. ವಿಮಾನದಲ್ಲಿ ಎದುರಾದ ತಾಂತ್ರಿಕ ದೋಷವೇ ಈ ದುರಂತಕ್ಕೆ ಕಾರಣವಾಗಿದ್ದು, ಇಬ್ಬರೂ ಪೈಲಟ್‌ಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪಾಕಿಸ್ತಾನ ಸೇನೆ ಖಚಿತಪಡಿಸಿದೆ.

ಈ ಘಟನೆಗೆ ಸಂಬಂಧಿಸಿದಂತೆ ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್ ಶರೀಫ್ ಮತ್ತು ಗೃಹ ಸಚಿವ ಮೊಹ್ಸಿನ್ ನಖ್ವಿ ತೀವ್ರ ಸಂತಾಪ ಸೂಚಿಸಿದ್ದು, ಮೃತರ ಕುಟುಂಬದವರಿಗೆ ಸಾಂತ್ವನ ತಿಳಿಸಿದ್ದಾರೆ.

ಜೂನ್ ತಿಂಗಳಲ್ಲಿ ಮುಜಫರಾಬಾದ್ ಸಮೀಪ ಪಾಕಿಸ್ತಾನ ಸೇನೆಯ Mi-17 ಹೆಲಿಕಾಪ್ಟರ್ ಟೇಕ್ ಆಫ್ ಆಗುವ ಸಂದರ್ಭದಲ್ಲಿ ತಾಂತ್ರಿಕ ದೋಷದಿಂದ ಪತನಗೊಂಡು ಸಿಬ್ಬಂದಿ ಸಾವನ್ನಪ್ಪಿದ್ದರು. ಜೂನ್ ತಿಂಗಳಲ್ಲಿ ಮರ್ದಾನ್‌ನಲ್ಲಿ ವಾಯುಪಡೆಯ ತರಬೇತಿ ವಿಮಾನ ಪತನಗೊಂಡು ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದರು. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ದಿಯಾಮೆರ್ ಜಿಲ್ಲೆಯ ಚಿಲಾಸ್ ಪಟ್ಟಣದಲ್ಲಿ ಸೇನಾ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ಪತನಗೊಂಡ ಪರಿಣಾಮ ಐವರು ಸಿಬ್ಬಂದಿ ಮೃತಪಟ್ಟಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹಂಚಿಕೊಳ್ಳಿ: