ನಾಟಿಂಗ್‌ಹ್ಯಾಮ್: ಎಐ ನೆರವಿನಿಂದ ತಾಯಿಯ ಜೀವ ಉಳಿಸಿದ ವೈದ್ಯ ಮಗ
ತೀವ್ರ ಸೆಳೆತದಿಂದ ಗಂಭೀರ ಸ್ಥಿತಿಯಲ್ಲಿದ್ದ ತಾಯಿ ಆನ್ ಪ್ಯಾಟ್ರಿಕ್ ಅವರ ಕಾಯಿಲೆಯ ಸಂಭವನೀಯ ಕಾರಣವನ್ನು ಹುಡುಕಲು ವೈದ್ಯ ಮಗ ಎಡ್ವರ್ಡ್ ಎಐ ನೆರವು ಪಡೆದರು. ಪಾರ್ಕಿನ್ಸನ್ ಔಷಧಿಗೆ ಸಂಬಂಧಿಸಿದ ವಿಟಮಿನ್ ಬಿ6 ಕೊರತೆಯ ಸು...

ಇಂಗ್ಲೆಂಡ್‌ನ ನಾಟಿಂಗ್‌ಹ್ಯಾಮ್‌ನಲ್ಲಿರುವ ಕ್ವೀನ್ಸ್ ಮೆಡಿಕಲ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆನ್ ಪ್ಯಾಟ್ರಿಕ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಪಾರ್ಕಿನ್ಸನ್ ಕಾಯಿಲೆ ಹೊಂದಿದ್ದ ಅವರಿಗೆ ನಿರಂತರವಾಗಿ ಸೆಳೆತ ಕಾಣಿಸಿಕೊಂಡಿತ್ತು. ಅರಿವಳಿಕೆ ತಜ್ಞರಾದ ಅವರ ಮಗ ಎಡ್ವರ್ಡ್ ಪ್ಯಾಟ್ರಿಕ್, ತಾಯಿಯ ವೈದ್ಯಕೀಯ ವರದಿಗಳನ್ನು ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನದ ಮೂಲಕ ವಿಶ್ಲೇಷಿಸಿದರು. ವಿಟಮಿನ್ ಬಿ6 ಕೊರತೆಯೇ ಈ ಸಮಸ್ಯೆಗೆ ಕಾರಣವಿರಬಹುದು ಎಂದು ಎಐ ನೀಡಿದ ಸುಳಿವನ್ನು ವೈದ್ಯರ ಗಮನಕ್ಕೆ ತಂದರು. ಚಿಕಿತ್ಸೆ ಆರಂಭಿಸಿದ ತಕ್ಷಣ ಸೆಳೆತ ನಿಂತಿದ್ದು, ಸದ್ಯ ಆನ್ ಪ್ಯಾಟ್ರಿಕ್ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.




