ನೆದರ್‌ಲ್ಯಾಂಡ್ಸ್ ಪ್ರಧಾನಿ ರಾಬ್ ಜೆಟ್ಟನ್ ಮತ್ತು ನಿಕೋಲಸ್ ಕೀನನ್ ಸರೊಗಸಿ ಮೂಲಕ ತಂದೆಯಾಗಲು ಸಿದ್ಧ
ನೆದರ್‌ಲ್ಯಾಂಡ್ಸ್ ಪ್ರಧಾನಿ ರಾಬ್ ಜೆಟ್ಟನ್ ಹಾಗೂ ಸಂಗಾತಿ ನಿಕೋಲಸ್ ಕೀನನ್, ತಮ್ಮ ಮೊದಲ ಮಗುವನ್ನು ಸರೊಗಸಿ ಮೂಲಕ ಸ್ವಾಗತಿಸುತ್ತಿದ್ದಾರೆ. ಆಪ್ತ ಸ್ನೇಹಿತೆ ಲಿಸಾ ಅಂಡಾಣು ದಾನ ಮಾಡಿ ಬಾಡಿಗೆ ತಾಯಿಯಾಗಲು ಒಪ್ಪಿಕೊಂಡಿದ್...

ನೆದರ್‌ಲ್ಯಾಂಡ್ಸ್‌ನ ಪ್ರಧಾನಿ ರಾಬ್ ಜೆಟ್ಟನ್ ಮತ್ತು ಅವರ ಸಂಗಾತಿ, ಹಾಕಿ ಆಟಗಾರ ನಿಕೋಲಸ್ ಕೀನನ್ ಅವರು ಬಾಡಿಗೆ ತಾಯ್ತನದ ಮೂಲಕ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇವರ ಆಪ್ತ ಸ್ನೇಹಿತೆ ಲಿಸಾ ಅವರು ಯಾವುದೇ ಹಣಕಾಸಿನ ಪ್ರತಿಫಲವಿಲ್ಲದೆ ಅಂಡಾಣು ದಾನ ಮಾಡುವ ಮೂಲಕ ಈ ಪ್ರಕ್ರಿಯೆಗೆ ಸಹಕರಿಸಿದ್ದಾರೆ. ನೆದರ್‌ಲ್ಯಾಂಡ್ಸ್‌ನ ಕಾನೂನಿನ ಅನ್ವಯ ಐವಿಎಫ್ ವಿಧಾನವನ್ನು ಅನುಸರಿಸಲಾಗಿದ್ದು, 2027ರಲ್ಲಿ ಮಗುವಿನ ಆಗಮನವಾಗಲಿದೆ ಎಂದು ಈ ಜೋಡಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದೆ. 2024ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಜೆಟ್ಟನ್ ಮತ್ತು ಕೀನನ್, ಮಗುವಿನ ಜನನದ ನಂತರ ಪಿತೃತ್ವ ರಜೆಯನ್ನು ಪಡೆಯಲಿದ್ದಾರೆ.




