ನಿಟ್ಟೂರಿನ ಶ್ರೀ ಧೂಮಾವತಿ ಯುವಕ ಮಂಡಲಕ್ಕೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕ್ರೀಡಾ ಕಿಟ್ ವಿತರಣೆ
ನಿಟ್ಟೂರು: ವಿಷ್ಣುಮೂರ್ತಿ ನಗರದಲ್ಲಿರುವ ಶ್ರೀ ಧೂಮಾವತಿ ಯುವಕ ಮಂಡಲ(ರಿ)ಕ್ಕೆ ಉಡುಪಿ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಕ್ರೀಡಾ ಸಲಕರಣೆಗಳ ಕಿಟ್ (Sports Kit) ವಿತರಿಸಲಾಯಿತು.ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ರೋಷನ...
ಸಂಪಾದಕ· 1 ನಿಮಿಷ ಓದು

ನಿಟ್ಟೂರು: ವಿಷ್ಣುಮೂರ್ತಿ ನಗರದಲ್ಲಿರುವ ಶ್ರೀ ಧೂಮಾವತಿ ಯುವಕ ಮಂಡಲ(ರಿ)ಕ್ಕೆ ಉಡುಪಿ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಕ್ರೀಡಾ ಸಲಕರಣೆಗಳ ಕಿಟ್ (Sports Kit) ವಿತರಿಸಲಾಯಿತು.

ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ರೋಷನ್ ಕುಮಾರ್ ಶೆಟ್ಟಿ ಅವರು ಕಿಟ್ ಅನ್ನು ಸಂಘದ ಪ್ರತಿನಿಧಿಗಳಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಗಣೇಶ ಕೋಟ್ಯಾನ್, ಕಾರ್ಯದರ್ಶಿ ಗಿರೀಶ್, ಸದಸ್ಯರಾದ ಸುನಿಲ್, ಮಂಜುನಾಥ್ ಎನ್., ದಾಮೋದರ ಭಟ್ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.



