ಹೆಬ್ರಿ ಅಮೃತ ಭಾರತಿ ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆ ಗಣಿತ ವಿಜ್ಞಾನ ಮೇಳ ಮತ್ತು ಸಂಸ್ಕೃತಿ ಜ್ಞಾನ ಪರಿಚಯ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ
ಬಾಲ್ಯ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಹೆತ್ತವರ ಹಾಗೂ ತಾವು ಕಲಿಯುತ್ತಿರುವ ಶಿಕ್ಷಣ ಸಂಸ್ಥೆಯ ಮಾರ್ಗದರ್ಶನ ಹಾಗೂ ಬೆಂಬಲ ದೊರೆತರೆ ರಾಷ್ಟ್ರಮಟ್ಟಕ್ಕೆ ಎರಬಹುದು ಎನ್ನುವುದನ್ನು ಹೆಬ್ರಿ ಅಮೃತ ಭಾರತಿ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು ಆಂಧ್ರಪ್ರದೇಶದಲ್ಲಿ ನಡೆದ ಮಾದರಿ ಪ್ರದರ್ಶನದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಸಾಧನೆಗೈದಿದ್ದಾರೆ

ಹೆಬ್ರಿ: ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದ 2026-27ನೇ ಸಾಲಿನ ಕ್ಷೇತ್ರ ಮಟ್ಟದ ಗಣಿತ ವಿಜ್ಞಾನ ಮೇಳ ಮತ್ತು ಸಂಸ್ಕೃತಿ ಜ್ಞಾನ ಪರಿಚಯ ಸ್ಪರ್ಧೆಯಲ್ಲಿ ಅಮೃತ ಭಾರತಿ ವಿದ್ಯಾಕೇಂದ್ರ (ಸಿಬಿಎಸ್ಇ), ಹೆಬ್ರಿಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಜಯವಾಡದಲ್ಲಿ ಇತ್ತೀಚೆಗೆ ನಡೆದ ಈ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳ ಹಲವು ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಮೃತ ಭಾರತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ನಾಲ್ಕೂ ವಿಭಾಗಗಳಲ್ಲೂ ಪ್ರಥಮ ಸ್ಥಾನ ಗಳಿಸಿ ಶಾಲೆಗೆ, ಜಿಲ್ಲೆಗೆ ಮತ್ತು ನಮ್ಮ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. _ವಿಜೇತ ವಿದ್ಯಾರ್ಥಿಗಳು

ಕು. ವಿವಿಧ ಹೆಗ್ಡೆ _ಗಣಿತ ಮಾದರಿ ಪ್ರಥಮ • ಕು. ಅಚಿಂತ್ಯ ಆರ್. ಭಟ್ – ಕಥಾ ಕಥನ – ಪ್ರಥಮ • ಕು. ವರ್ಷಿತಾ ಎಸ್ – ಗಣಿತ ಮಾದರಿ – ಪ್ರಥಮ • ಮಾ. ಪ್ರಥಮ್ ಎ. ಕುಲಾಲ್ – ನವೀನ ವಿಜ್ಞಾನ ಮಾದರಿ – ಪ್ರಥಮ. ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದವರು ವಿದ್ಯಾರ್ಥಿಗಳ ಸಾಧನೆಗೆ ಹಾರ್ದಿಕ ಅಭಿನಂದನೆ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ .



