ಮುಖ್ಯ ವಿಷಯಕ್ಕೆ ಹೋಗಿ
The Karnataka Today
17 Oct
ತಂತ್ರಜ್ಞಾನ

ರಾತ್ರಿ ಸೂರ್ಯನ ಬೆಳಕು ನೀಡಲು ಹೈದರಾಬಾದ್‌ನ ಸ್ಕೈರೂಟ್ ಜೊತೆ ಅಮೆರಿಕದ ಕಂಪನಿ ಒಪ್ಪಂದ

ರಾತ್ರಿ ವೇಳೆಯೂ ಭೂಮಿಗೆ ಸೂರ್ಯನ ಬೆಳಕನ್ನು ಒದಗಿಸುವ ವಿನೂತನ ಯೋಜನೆಗಾಗಿ ಅಮೆರಿಕದ ರಿಫ್ಲೆಕ್ಟ್‌ ಆರ್ಬಿಟಲ್‌ ಮತ್ತು ಹೈದರಾಬಾದ್‌ನ ಸ್ಕೈರೂಟ್‌ ಸಂಸ್ಥೆಗಳು ಒಪ್ಪಂದ ಮಾಡಿಕೊಂಡಿವೆ. ಸ್ಕೈರೂಟ್‌ನ ವಿಕ್ರಂ ರಾಕೆಟ್‌ ಮೂಲಕ...

ಇನ್ಮುಂದೆ ರಾತ್ರಿ ಬಾಡಿಗೆಗೆ ಸಿಗಲಿದೆ ಸೂರ್ಯನ ಬೆಳಕು; ಸ್ಕೈರೂಟ್ ಜೊತೆ ಅಮೆರಿಕಾ  ಒಪ್ಪಂದ
ಹಂಚಿಕೊಳ್ಳಿ:

ಅಮೆರಿಕದ ಕ್ಯಾಲಿಫೋರ್ನಿಯಾ ಮೂಲದ ರಿಫ್ಲೆಕ್ಟ್‌ ಆರ್ಬಿಟಲ್‌ ಸಂಸ್ಥೆಯು ರಾತ್ರಿ ವೇಳೆ ಭೂಮಿಗೆ ಸೂರ್ಯನ ಬೆಳಕನ್ನು ಒದಗಿಸುವ ವಿನೂತನ ಯೋಜನೆಗಾಗಿ ಹೈದರಾಬಾದ್‌ನ ಸ್ಕೈರೂಟ್‌ ಏರೋಸ್ಪೇಸ್‌ ಜೊತೆ ಕೈಜೋಡಿಸಿದೆ. ಈ ಯೋಜನೆಯ ಭಾಗವಾಗಿ ಸ್ಕೈರೂಟ್‌ನ ವಿಕ್ರಂ ರಾಕೆಟ್ ಬಳಸಿ ಎರಡು ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಾಗುವುದು. ಈ ತಂತ್ರಜ್ಞಾನದ ಮೂಲಕ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಅಗತ್ಯವಿರುವಾಗ ಬೆಳಕನ್ನು ಪ್ರತಿಫಲಿಸಲು ಸಾಧ್ಯವಾಗುತ್ತದೆ. ತುರ್ತು ರಕ್ಷಣಾ ಕಾರ್ಯಗಳು, ಕೈಗಾರಿಕಾ ಚಟುವಟಿಕೆಗಳು ಮತ್ತು ಸೌರ ವಿದ್ಯುತ್ ಉತ್ಪಾದನೆಯಂತಹ ಕ್ಷೇತ್ರಗಳಲ್ಲಿ ಈ ಸೇವೆಯು ಹೆಚ್ಚಿನ ಪ್ರಯೋಜನ ನೀಡಲಿದೆ ಎಂದು ಕಂಪನಿಗಳು ತಿಳಿಸಿವೆ.

ಹಂಚಿಕೊಳ್ಳಿ: