ಮುಖ್ಯ ವಿಷಯಕ್ಕೆ ಹೋಗಿ
The Karnataka Today
17 Oct
ಕ್ರೀಡೆ

ನವೆಂಬರ್ 21ರಂದು ಚೆನ್ನೈನಲ್ಲಿ ಕಾವ್ಯಾ ಮಾರನ್ ಹಾಗೂ ಅನಿರುದ್ಧ್ ರವಿಚಂದರ್ ವಿವಾಹ

ಸನ್‌ರೈಸರ್ಸ್ ಹೈದರಾಬಾದ್ ತಂಡದ ಸಹ ಒಡತಿ ಕಾವ್ಯಾ ಮಾರನ್ ಮತ್ತು ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ನವೆಂಬರ್ 21ರಂದು ಚೆನ್ನೈನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈ ವಿವಾಹ ಮಹೋತ್ಸವಕ್ಕೆ ಪ್ರಧಾನಿ ನರೇಂದ...

· ಬೆಂಗಳೂರು ನಗರ
ಕಾವ್ಯ ಮಾರನ್-ಅನಿರುದ್ದ್ ಮದುವೆ ಡೇಟ್ ಫಿಕ್ಸ್‌; ಪ್ರಧಾನಿ ಮೋದಿ, ಸಿಎಂ ವಿಜಯ್‌ಗೂ ಬಂದು ಆಹ್ವಾನ..!
ಹಂಚಿಕೊಳ್ಳಿ:

ಸನ್ ಗ್ರೂಪ್ ಮುಖ್ಯಸ್ಥ ಕಲಾನಿಧಿ ಮಾರನ್ ಅವರ ಪುತ್ರಿ ಕಾವ್ಯಾ ಮಾರನ್ ಹಾಗೂ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ನವೆಂಬರ್ 21ರಂದು ಚೆನ್ನೈನಲ್ಲಿ ನಡೆಯಲಿರುವ ಈ ವಿವಾಹ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ, ತೆಲಂಗಾಣ ಸಿಎಂ ಎ ರೇವಂತ್ ರೆಡ್ಡಿ ಹಾಗೂ ತಮಿಳುನಾಡು ಸಿಎಂ ಸಿ ಜೋಸೆಫ್ ವಿಜಯ್ ಅವರಿಗೆ ಆಹ್ವಾನ ನೀಡಲಾಗಿದೆ. ಕಲಾನಿಧಿ ಮಾರನ್, ಕಾವೇರಿ ಮಾರನ್ ಮತ್ತು ಅನಿರುದ್ಧ್ ಅವರ ಪೋಷಕರಾದ ರವಿ ರಾಘವೇಂದ್ರ ಹಾಗೂ ಲಕ್ಷ್ಮಿ ರವಿಚಂದರ್ ಅವರು ಗಣ್ಯರನ್ನು ಭೇಟಿ ಮಾಡಿ ಆಮಂತ್ರಣ ಪತ್ರಿಕೆಯನ್ನು ಸಲ್ಲಿಸಿದ್ದಾರೆ. ಐಪಿಎಲ್ ತಂಡದ ಸಹ ಮಾಲೀಕರಾಗಿರುವ ಕಾವ್ಯಾ ಮತ್ತು ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಅನಿರುದ್ಧ್ ಅವರ ವಿವಾಹ ಮಹೋತ್ಸವದಲ್ಲಿ ರಾಜಕೀಯ ಮುಖಂಡರು ಹಾಗೂ ಸಿನಿಮಾ ತಾರೆಯರು ಭಾಗವಹಿಸಲಿದ್ದಾರೆ.

ಹಂಚಿಕೊಳ್ಳಿ: