ಮುಂಬೈ ಇಂಡಿಯನ್ಸ್ ತಂಡದ ಕೋಚ್ ಹುದ್ದೆಯಿಂದ ಮಹೆಲಾ ಜಯವರ್ಧನೆ ನಿರ್ಗಮನ
2027ರ ಐಪಿಎಲ್ ಟೂರ್ನಿಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡದಲ್ಲಿ ಮಹಾ ಸಂಚಲನ ಉಂಟಾಗಿದ್ದು, ಯಶಸ್ವಿ ಕೋಚ್ ಮಹೆಲಾ ಜಯವರ್ಧನೆ ತಂಡದಿಂದ ಹೊರಬಂದಿದ್ದಾರೆ. ಫ್ರಾಂಚೈಸಿ ಮುಖ್ಯಸ್ಥೆ ನೀತಾ ಅಂಬಾನಿ ಅವರು ಜಯವರ್ಧನೆ ಅವರ ಕೊಡುಗ...

ಐಪಿಎಲ್ ತಂಡ ಮುಂಬೈ ಇಂಡಿಯನ್ಸ್ ತನ್ನ ಯಶಸ್ವಿ ಕೋಚ್ ಮಹೆಲಾ ಜಯವರ್ಧನೆ ಅವರನ್ನು ತಂಡದಿಂದ ಬಿಡುಗಡೆ ಮಾಡಿದೆ. ಈ ನಿರ್ಧಾರವನ್ನು ಫ್ರಾಂಚೈಸಿ ತನ್ನ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಅಧಿಕೃತವಾಗಿ ಖಚಿತಪಡಿಸಿದೆ. 2017ರಲ್ಲಿ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡಿದ್ದ ಜಯವರ್ಧನೆ, ತಂಡದ ಹಲವು ಐಪಿಎಲ್ ಪ್ರಶಸ್ತಿಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ದೀರ್ಘಕಾಲದ ಸೇವೆ ಮತ್ತು ಕೊಡುಗೆಯನ್ನು ಸ್ಮರಿಸಿರುವ ಫ್ರಾಂಚೈಸಿ ಮುಖ್ಯಸ್ಥೆ ನೀತಾ ಅಂಬಾನಿ, ಅವರ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.




