ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಸುದ್ದಿ

ಉಡುಪಿಯಲ್ಲಿ ಅಕ್ಟೋಬರ್ 24ರಂದು ಪರಿವಾರ್ ಕ್ರೆಡಿಟ್ ಸೊಸೈಟಿಯ ನೂತನ ಕಚೇರಿ ಉದ್ಘಾಟನೆ

25 ವರ್ಷಗಳ ಪಯಣ; ₹50 ಕೋಟಿ ಠೇವಣಿ, ₹125 ಕೋಟಿ ವಾರ್ಷಿಕ ವಹಿವಾಟು – ಕೆ. ರಘುಪತಿ ಭಟ್ ಉಡುಪಿ:... The post ಪರಿವಾರ್ ಕ್ರೆಡಿಟ್ ಕೋ-ಆ. ಸೊಸೈಟಿ ರಜತ ಮಹೋತ್ಸವ ಸಂಭ್ರಮ: ಅ.24ರಂದು ನೂತನ ಕಚೇರಿ ಉದ್ಘಾಟನೆ first ap...

· ಉಡುಪಿ
ಪರಿವಾರ್ ಕ್ರೆಡಿಟ್ ಕೋ-ಆ. ಸೊಸೈಟಿ ರಜತ ಮಹೋತ್ಸವ ಸಂಭ್ರಮ: ಅ.24ರಂದು ನೂತನ ಕಚೇರಿ ಉದ್ಘಾಟನೆ
ಹಂಚಿಕೊಳ್ಳಿ:

ಉಡುಪಿಯ ಜೋಡುಕಟ್ಟೆಯಲ್ಲಿರುವ ಆಶ್ರಯ ಟವರ್ಸ್‌ನಲ್ಲಿ ಪರಿವಾರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನೂತನ ಪ್ರಧಾನ ಕಚೇರಿಯು ಅಕ್ಟೋಬರ್ 24ರಂದು ಲೋಕಾರ್ಪಣೆಯಾಗಲಿದೆ. 25 ವರ್ಷಗಳ ಯಶಸ್ವಿ ಪಯಣ ಪೂರೈಸಿರುವ ಈ ಸಂಸ್ಥೆಯು, ಪ್ರಸ್ತುತ 50 ಕೋಟಿ ರೂಪಾಯಿ ಠೇವಣಿ ಮತ್ತು 125 ಕೋಟಿ ರೂಪಾಯಿ ವಾರ್ಷಿಕ ವಹಿವಾಟಿನೊಂದಿಗೆ ಮುನ್ನಡೆಯುತ್ತಿದೆ. ಸುಮಾರು 2,000 ಸದಸ್ಯರನ್ನು ಹೊಂದಿರುವ ಈ ಸಂಘವು, ಸದಸ್ಯರಿಗೆ ವರ್ಷಕ್ಕೆ ಶೇ 12ರಷ್ಟು ಲಾಭಾಂಶ ನೀಡುತ್ತಿದೆ. ಆಡಳಿತ ಮಂಡಳಿಯ ಪ್ರಯತ್ನ ಮತ್ತು ಸದಸ್ಯರ ಸಹಕಾರದಿಂದಾಗಿ ಸ್ವಂತ ಕಟ್ಟಡದಲ್ಲಿ ಕಚೇರಿ ಆರಂಭಿಸುವ ಕನಸು ನನಸಾಗಿದ್ದು, ಇದು ಮುಂದಿನ ದಿನಗಳಲ್ಲಿ ಉತ್ತಮ ಸೇವೆ ನೀಡಲು ಸಹಕಾರಿಯಾಗಲಿದೆ ಎಂದು ಅಧ್ಯಕ್ಷ ಕೆ. ರಘುಪತಿ ಭಟ್ ತಿಳಿಸಿದ್ದಾರೆ.

ಹಂಚಿಕೊಳ್ಳಿ: