ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಸುದ್ದಿ

ಬೆಂಗಳೂರು: ವಾಣಿ ವಿಲಾಸ ಆಸ್ಪತ್ರೆಯಲ್ಲಿ 57 ದಿನದ ಮಗುವಿನ ಕಾಲುಬೆರಳು ಕತ್ತರಿಸಿದ ವೈದ್ಯರು

ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ 57 ದಿನದ ಮಗು ಕಾಲಿನ ಬೆರಳು ಕಳೆದುಕೊಂಡಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಆದರೆ, ಮಗುವಿಗೆ ಮೊದಲೇ ನಂಜಾಗಿತ್ತು ಮತ್ತು ರಕ್ತ ಹೆಪ್ಪುಗಟ್ಟಿತ್ತು, ನಾವು...

· ಬೆಂಗಳೂರು ನಗರ
ಜ್ವರ ಎಂದು ವಾಣಿ ವಿಲಾಸ ಆಸ್ಪತ್ರೆಗೆ ದಾಖಲಾದ ಮಗುವಿನ ಕಾಲುಬೆರಳು ಕಟ್!  ಅಸಲಿಗೆ ಆಗಿದ್ದೇನು?
ಹಂಚಿಕೊಳ್ಳಿ:

ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 57 ದಿನದ ಮಗುವಿನ ಕಾಲುಬೆರಳನ್ನು ವೈದ್ಯರು ತೆಗೆದು ಹಾಕಿದ್ದಾರೆ. ಜ್ವರದ ಕಾರಣದಿಂದ ದಾಖಲಾಗಿದ್ದ ಮಗುವಿನ ಕಾಲಿಗೆ ಗ್ಯಾಂಗ್ರೀನ್ ಉಂಟಾಗಿದ್ದರೂ ವೈದ್ಯರು ನಿರ್ಲಕ್ಷ್ಯ ವಹಿಸಿದ್ದರಿಂದ ಈ ಸ್ಥಿತಿ ತಲುಪಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಆದರೆ, ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಚಿಕ್ಕನರಸರೆಡ್ಡಿ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ಮಗು ಆಸ್ಪತ್ರೆಗೆ ಬರುವಾಗಲೇ ಸೋಂಕಿನಿಂದ ಬಳಲುತ್ತಿತ್ತು ಮತ್ತು ಪ್ರಾಣಾಪಾಯದಲ್ಲಿದ್ದ ಮಗುವನ್ನು ಉಳಿಸಿಕೊಳ್ಳಲು ವೈದ್ಯರು ಶ್ರಮಿಸಿದ್ದಾರೆ ಎಂದು ಆಸ್ಪತ್ರೆಯ ಅಧೀಕ್ಷಕಿ ಡಾ. ಸವಿತಾ ಸ್ಪಷ್ಟಪಡಿಸಿದ್ದಾರೆ.

ಹಂಚಿಕೊಳ್ಳಿ: