ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಸುದ್ದಿ

ತುಮಕೂರು: ತುಮುಲ್ ನೇಮಕಾತಿ ಅಕ್ರಮದ ವಿರುದ್ಧ 38 ಅಭ್ಯರ್ಥಿಗಳಿಂದ ಕಾನೂನು ಸಮರ

ತುಮಕೂರು: ಹಾಲು ಒಕ್ಕೂಟದ (TUMUL) ನೇಮಕಾತಿ ಅಕ್ರಮದ ಆರೋಪ ಮತ್ತೆ ಮುನ್ನೆಲೆಗೆ ಬಂದಿದೆ. 2016-17ನೇ ಸಾಲಿನಲ್ಲಿ ನಡೆದ 97 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ನೌಕರಿಯಿಂದ ವಂಚಿತ...

· ತುಮಕೂರು
ತುಮಕೂರು ಹಾಲು ಒಕ್ಕೂಟದ ನೇಮಕಾತಿ ವಿವಾದ ಮತ್ತೆ ಮುನ್ನೆಲೆಗೆ; 38 ಅಭ್ಯರ್ಥಿಗಳಿಂದ ಕಾನೂನು ಹೋರಾಟ
ಹಂಚಿಕೊಳ್ಳಿ:

ತುಮಕೂರು ಹಾಲು ಒಕ್ಕೂಟದಲ್ಲಿ 2016-17ನೇ ಸಾಲಿನಲ್ಲಿ ನಡೆದ 97 ಹುದ್ದೆಗಳ ನೇಮಕಾತಿಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಆರೋಪಿಸಿ 38 ಅಭ್ಯರ್ಥಿಗಳು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಪೈಕಿ ವೇಣುಗೋಪಾಲ್ ಅವರು ಸುಪ್ರೀಂ ಕೋರ್ಟ್ ತೀರ್ಪಿನ ಮೂಲಕ ಈಗಾಗಲೇ ಹುದ್ದೆಯನ್ನು ಪಡೆದಿದ್ದು, ಇದೀಗ ಉಳಿದ 37 ಮಂದಿ ಕೂಡ ಹೋರಾಟಕ್ಕೆ ಇಳಿದಿದ್ದಾರೆ. ನೇಮಕಾತಿ ಸಂದರ್ಭದಲ್ಲಿ ಹಣಕ್ಕಾಗಿ ಹುದ್ದೆ ಮಾರಾಟ, ಒಎಂಆರ್ ಶೀಟ್ ತಿದ್ದುಪಡಿ ಹಾಗೂ ಅಕ್ರಮ ನಡೆದಿದೆ ಎಂದು ಅಭ್ಯರ್ಥಿಗಳು ದೂರಿದ್ದಾರೆ. ಈ ಸಂಪೂರ್ಣ ನೇಮಕಾತಿ ಪ್ರಕ್ರಿಯೆಯನ್ನು ತನಿಖೆಗೊಳಪಡಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಹಂಚಿಕೊಳ್ಳಿ: