ತಲಕಾವೇರಿಯಲ್ಲಿ ಇಂದು ಸಂಜೆ 7:50ಕ್ಕೆ ಕಾವೇರಿ ತೀರ್ಥೋದ್ಭವ: ಸಕಲ ಸಿದ್ಧತೆ ಪೂರ್ಣ
ಮಡಿಕೇರಿ: ಕನ್ನಡ ನಾಡಿನ ಜೀವನಾಡಿ, ದಕ್ಷಿಣ ಭಾರತದ ಜೀವನದಿ ಎಂದೇ ಪ್ರಸಿದ್ಧಿ ಪಡೆದಿರುವ ಪವಿತ್ರ ಕಾವೇರಿ ಮಾತೆಯ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೊಡಗು (Kodagu) ಜಿಲ್ಲೆಯ ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್...

ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಇಂದು ಸಂಜೆ 7 ಗಂಟೆ 50 ನಿಮಿಷಕ್ಕೆ ಮೇಷ ಲಗ್ನದಲ್ಲಿ ಪವಿತ್ರ ಕಾವೇರಿ ತೀರ್ಥೋದ್ಭವ ನಡೆಯಲಿದೆ. ಈ ಧಾರ್ಮಿಕ ಕಾರ್ಯಕ್ರಮಕ್ಕಾಗಿ ತಲಕಾವೇರಿ ಹಾಗೂ ಭಾಗಮಂಡಲ ಕ್ಷೇತ್ರಗಳು ಹೂವು ಮತ್ತು ದೀಪಗಳಿಂದ ಸಿಂಗಾರಗೊಂಡಿವೆ. ಗುರುರಾಜ್ ಆಚಾರ್ಯ ನೇತೃತ್ವದ 9 ಮಂದಿ ಅರ್ಚಕರು ಪೂಜಾ ವಿಧಿವಿಧಾನಗಳಿಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಭಕ್ತರಿಗೆ ತೀರ್ಥ ಪಡೆಯಲು ಅನುಕೂಲವಾಗುವಂತೆ ಬ್ಯಾರಿಕೇಡ್ ಹಾಗೂ ಎಲ್ಇಡಿ ಪರದೆಗಳನ್ನು ಅಳವಡಿಸಲಾಗಿದ್ದು, ದೇವರ ಭಂಡಾರ ಪೆಟ್ಟಿಗೆಯನ್ನು ಈಗಾಗಲೇ ತಲಕಾವೇರಿಗೆ ತರಲಾಗಿದೆ.




