ಮಕ್ಕಳ ಪ್ರೇಮದ ವಿಷಯದಲ್ಲಿ ಪೋಷಕರು ಅನುಸರಿಸಬೇಕಾದ ಸೂಕ್ತ ಮಾರ್ಗೋಪಾಯಗಳು
ಮಕ್ಕಳು ದೊಡ್ಡವರಾದಂತೆ ಆಕರ್ಷಣೆಗೆ ಒಳಗಾಗಿ ಪ್ರೀತಿ ಪ್ರೇಮದಲ್ಲಿ ಬಿಳುವುದು ಸಹಜ. ಆದರೆ ಪೋಷಕರು ಇಂಥ ಸಂದರ್ಭದಲ್ಲಿ ಕೋಪಿಸಿಕೊಳ್ಳದೆ , ಮಕ್ಕಳ ಮೇಲೆ ಅನುಮಾನ, ಕಟ್ಟುನಿಟ್ಟಿನ ನಿರ್ಬಂಧ ಹೇರುವ ಬದಲು ಸಮಾಧಾನ ಹೇಗೆ ನಿಭಾ...

ಹದಿಹರೆಯದಲ್ಲಿ ಮಕ್ಕಳು ಪ್ರೀತಿ ಅಥವಾ ಆಕರ್ಷಣೆಗೆ ಒಳಗಾದಾಗ ಪೋಷಕರು ಕೋಪಗೊಳ್ಳದೆ ಶಾಂತಿಯುತವಾಗಿ ವರ್ತಿಸುವುದು ಅಗತ್ಯ. ಮಕ್ಕಳ ಮೇಲೆ ನಿರ್ಬಂಧ ಹೇರುವ ಬದಲು ಅವರೊಂದಿಗೆ ಮುಕ್ತವಾಗಿ ಮಾತನಾಡಿ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು. ಶಿಕ್ಷಣ ಮತ್ತು ಭವಿಷ್ಯದ ಗುರಿಗಳ ಬಗ್ಗೆ ತಿಳಿಹೇಳುತ್ತಲೇ ಸ್ನೇಹದ ಮಿತಿ ಹಾಗೂ ಸುರಕ್ಷತೆಯ ಮಹತ್ವವನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು. ಮಗುವಿನ ನಡವಳಿಕೆಯಲ್ಲಿ ಗಂಭೀರ ಸಮಸ್ಯೆ ಕಂಡುಬಂದಲ್ಲಿ ಮನಶ್ಶಾಸ್ತ್ರಜ್ಞರ ಸಲಹೆ ಪಡೆಯುವುದು ಉತ್ತಮ.




