ಮುಖ್ಯ ವಿಷಯಕ್ಕೆ ಹೋಗಿ
The Karnataka Today
17 Oct
ಸುದ್ದಿ

ಸಾಗರ: ಮನೆಯ ಬಳಿ ಆಟವಾಡುತ್ತಿದ್ದ ಎರಡು ವರ್ಷದ ಬಾಲಕ ಹಾವು ಕಚ್ಚಿ ಸಾವು

ಶಿವಮೊಗ್ಗ: ಮನೆಯ ಬಳಿ ಆಟವಾಡುತ್ತಿದ್ದ ಎರಡು ವರ್ಷದ ಮಗುವಿಗೆ ಹಾವು (Snake) ಕಚ್ಚಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಸಾಗರ (Sagar) ತಾಲೂಕಿನ ಕಲಸಿಪೇಟೆ ಗ್ರಾಮದಲ್ಲಿ ನಡೆದಿದೆ. ಯುನೈ (2) ಹಾವು ಕಚ್ಚಿ ಮೃತಪಟ್ಟ ಬಾಲಕ...

· ಶಿವಮೊಗ್ಗ
ಸಾಗರ | ಹಾವು ಕಚ್ಚಿ ಎರಡು ವರ್ಷದ ಮಗು ದುರ್ಮರಣ
ಹಂಚಿಕೊಳ್ಳಿ:

ಸಾಗರ ತಾಲೂಕಿನ ಕಲಸಿಪೇಟೆ ಗ್ರಾಮದಲ್ಲಿ ಅನಿಲ್ ಮತ್ತು ರೂಪ ದಂಪತಿಯ ಮಗ ಯುನೈ ಹಾವು ಕಚ್ಚಿ ಮೃತಪಟ್ಟಿದ್ದಾನೆ. ತನ್ನ ಮನೆಯ ಆವರಣದಲ್ಲಿ ಆಟವಾಡುತ್ತಿದ್ದ ವೇಳೆ ಬಾಲಕನಿಗೆ ಹಾವು ಕಚ್ಚಿದ್ದು, ಚಿಕಿತ್ಸೆಗೆ ಕರೆದೊಯ್ಯುವ ಮೊದಲೇ ಮಗು ಪ್ರಾಣ ಕಳೆದುಕೊಂಡಿದೆ. ನಾಡಕಲಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಈ ದುರ್ಘಟನೆಗೆ ಸಂಬಂಧಿಸಿದಂತೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಂಚಿಕೊಳ್ಳಿ: