ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಸುದ್ದಿ

ಬೆಂಗಳೂರಿನ ಕನ್ನಡ ಭವನದಲ್ಲಿ ವಿಜೃಂಭಣೆಯಿಂದ ನಡೆದ ಶ್ರೀ ಮಧ್ವ ಜಯಂತಿ ಉತ್ಸವ

ಬೆಂಗಳೂರಿನ ಕನ್ನಡ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶ್ರೀ ಮಧ್ವ ಜಯಂತಿ ಉತ್ಸವ ನಡೆಯಿತು. ಗಣ್ಯರ ಉಪಸ್ಥಿತಿ, ಪುಷ್ಪಾರ್ಚನೆ ಹಾಗೂ ಸ್ತೋತ್ರ ಪಠಣದ ಮೂಲಕ ಶ್ರೀಮದಾಚಾರ್ಯರಿಗೆ ನಮನ ಸಲ್ಲಿಸಲಾಯಿತು.

· ಬೆಂಗಳೂರು ನಗರ
ಬೆಂಗಳೂರಿನ ಕನ್ನಡ ಭವನದಲ್ಲಿ ಶ್ರೀ ಮಧ್ವ ಜಯಂತಿ ಉತ್ಸವ: ಗಣ್ಯರಿಂದ ಶ್ರೀಮಧ್ವಾಚಾರ್ಯರಿಗೆ ನಮನ
ಹಂಚಿಕೊಳ್ಳಿ:

ಬೆಂಗಳೂರಿನ ಕನ್ನಡ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಆಯೋಜಿಸಿದ್ದ ಶ್ರೀ ಮಧ್ವ ಜಯಂತಿ ಕಾರ್ಯಕ್ರಮವು ಭಕ್ತಿಪೂರ್ವಕವಾಗಿ ನಡೆಯಿತು. ಶಾಸಕ ದಿನೇಶ್ ಗುಂಡೂರಾವ್, ಅಸಗೋಡು ಜಯಸಿಂಹ, ಡಾ. ಶ್ರೀ ವ್ಯಾಸನಕೆರೆ ಪ್ರಭಂಜನ ಆಚಾರ್ಯ ಹಾಗೂ ಡಾ. ಶ್ರೀ ಸತ್ಯಧ್ಯಾನ ಆಚಾರ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಾ. ಪಂ. ಶ್ರೀ ಪ್ರಸನ್ನಾಚಾರ್ಯ ಎಸ್. ಕಟ್ಟಿ ಅವರು ಶ್ರೀಮಧ್ವಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಪೂಜಾ ಕಾರ್ಯಗಳನ್ನು ನೆರವೇರಿಸಿದರು. ವೇದವ್ಯಾಸ ಕಟ್ಟಿ ಮತ್ತು ವರದರಾಜ ಕಟ್ಟಿ ಅವರು ಸ್ತೋತ್ರ ಪಠಣದ ಮೂಲಕ ಆಚಾರ್ಯರ ತತ್ವಗಳನ್ನು ಸ್ಮರಿಸಿದರು.

ಹಂಚಿಕೊಳ್ಳಿ: