ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಸುದ್ದಿ

ರಾಜರಾಜೇಶ್ವರಿನಗರ ಠಾಣೆಯಲ್ಲಿ ನಟ ಧನ್ವೀರ್ ಗೌಡ ವಿರುದ್ಧ ಎನ್‌ಸಿಆರ್ ದಾಖಲು

– ಕೆಲವರು ಮುಖವಾಡ ಹಾಕ್ಕೊಂಡೇ ಬದುಕಬೇಕಿತ್ತು, ಅದಕ್ಕೆ ಅಂತರ ಕಾಯ್ದಿರಿಸಿದ್ರು – ವಿಜಯಲಕ್ಷ್ಮಿ – ಧನ್ವೀರ್‌ ಅವ್ರನ್ನ ದರ್ಶನ್‌ ಜೈಲಲ್ಲೇ ಸಮಾಧಾನಪಡಿಸಿದ್ರಾ? ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalakshmi) Vs...

· ಬೆಂಗಳೂರು ನಗರ
ಶೀಘ್ರದಲ್ಲೇ ಮುಖವಾಡ ಕಳಚುತ್ತೇನೆ – ವಿಜಯಲಕ್ಷ್ಮಿಗೆ ಧನ್ವೀರ್‌ ಪರೋಕ್ಷ ವಾರ್ನಿಂಗ್‌; ʻಪಬ್ಲಿಕ್‌ ಟಿವಿʼಗೆ ಫಸ್ಟ್‌ ರಿಯಾಕ್ಷನ್‌
ಹಂಚಿಕೊಳ್ಳಿ:

ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್ ಅವರನ್ನು ನಿಂದಿಸಿದ ಆರೋಪದ ಮೇಲೆ ನಟ ಧನ್ವೀರ್ ಗೌಡ ವಿರುದ್ಧ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಧನ್ವೀರ್, ಮ್ಯಾನೇಜರ್ ನಾಗರಾಜ್ ಅವರ ಬಂಡವಾಳವನ್ನು ಸದ್ಯದಲ್ಲೇ ಬಯಲು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸತ್ಯಾಂಶವನ್ನು ಬಹಿರಂಗಪಡಿಸಲು ಶೀಘ್ರವೇ ಸುದ್ದಿಗೋಷ್ಠಿ ನಡೆಸುವುದಾಗಿ ತಿಳಿಸಿರುವ ಅವರು, ಮುಖವಾಡಗಳನ್ನು ಕಳಚುವ ಸಮಯ ಬಂದಿದೆ ಎಂದು ಹೇಳಿದ್ದಾರೆ. ದರ್ಶನ್ ಅವರ ಪರವಾಗಿ ನಿಂತಿದ್ದರಿಂದಲೇ ಕೆಲವರು ತಮ್ಮೊಂದಿಗೆ ಅಂತರ ಕಾಯ್ದುಕೊಂಡಿದ್ದರು ಎಂದು ಧನ್ವೀರ್ ಆರೋಪಿಸಿದ್ದಾರೆ.

ಹಂಚಿಕೊಳ್ಳಿ: