ಭಟ್ಕಳದಲ್ಲಿ ಹೊಸ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ
ಭಟ್ಕಳ: ಕರಾವಳಿ ಸಹಿತ ರಾಜ್ಯದ ವಿವಿಧೆಡೆ ನೇತ್ರ ಚಿಕಿತ್ಸೆಯಲ್ಲಿ ಹೆಸರು ವಾಸಿಯಾದ ಪ್ರಸಾದ್ ನೇತ್ರಾಲಯವು ಈಗ ಉತ್ತರ ಕನ್ನಡ ಜಿಲ್ಲೆಯ... The post ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ – ನೂತನ...

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಸಾಗರ ರಸ್ತೆಯಲ್ಲಿರುವ ನಾಯಕ್ ಹೆಲ್ತ್ ಸೆಂಟರ್ನಲ್ಲಿ ಪ್ರಸಾದ್ ನೇತ್ರಾಲಯದ ನೂತನ ಕೇಂದ್ರವು ಆರಂಭವಾಗಿದೆ. ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ದೀಪ ಬೆಳಗುವ ಮೂಲಕ ಆಸ್ಪತ್ರೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಮಾಂಕಾಳು ಎಸ್. ವೈದ್ಯ ಅವರು, ಇನ್ನು ಮುಂದೆ ಸ್ಥಳೀಯ ರೈತರು ಮತ್ತು ಮೀನುಗಾರರು ಕಣ್ಣಿನ ಚಿಕಿತ್ಸೆಗಾಗಿ ದೂರದ ಜಿಲ್ಲೆಗಳಿಗೆ ಹೋಗುವ ಅಗತ್ಯವಿಲ್ಲ ಎಂದು ತಿಳಿಸಿದರು. ಆಸ್ಪತ್ರೆಯ ಸ್ಥಾಪಕ ಡಾ. ಕೃಷ್ಣ ಪ್ರಸಾದ್ ಕೂಡ್ಲು ಅವರು ಸಣ್ಣ ಪಟ್ಟಣಗಳಲ್ಲೂ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಒದಗಿಸುವುದೇ ತಮ್ಮ ಗುರಿ ಎಂದರು.




