ಬೆಂಗಳೂರಿನಲ್ಲಿ ದಸರಾ ರಶ್: 6 ಗಂಟೆಗಳ ಕಾಲ ಟ್ರಾಫಿಕ್ನಲ್ಲಿ ಸಿಲುಕಿದ ಪ್ರಯಾಣಿಕರು
ಬೆಂಗಳೂರು: ದಸರಾ ಹಬ್ಬದ (Dasara Festival) ಹಿನ್ನೆಲೆ ತಮ್ಮ ಊರುಗಳಿಗೆ ತೆರಳಲು ಮುಂದಾಗಿದ್ದ ಪ್ರಯಾಣಿಕರು, ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ಉಂಟಾದ ಭಾರೀ ಟ್ರಾಫಿಕ್ ಜಾಮ್ನಿಂದಾಗಿ (Bengaluru Traffic Jam) ತೀವ...

ದಸರಾ ಹಬ್ಬದ ಪ್ರಯುಕ್ತ ಊರಿಗೆ ತೆರಳಲು ಸಿದ್ಧರಾಗಿದ್ದ ಬೆಂಗಳೂರಿನ ಸಾವಿರಾರು ಪ್ರಯಾಣಿಕರು ಭಾರಿ ಸಂಚಾರ ದಟ್ಟಣೆಯಿಂದಾಗಿ ಪರದಾಡಿದರು. ಮೈಸೂರು ರಸ್ತೆ, ತುಮಕೂರು ರಸ್ತೆ ಮತ್ತು ಏರ್ಪೋರ್ಟ್ ರಸ್ತೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಸುಮಾರು 6 ಗಂಟೆಗಳ ಕಾಲ ಪ್ರಯಾಣಿಕರು ರಸ್ತೆಯಲ್ಲೇ ಕಾಯುವಂತಾಯಿತು. ಈ ವೇಳೆ ಸುರಿದ ಮಳೆಯು ಮಕ್ಕಳ ಮತ್ತು ವೃದ್ಧರ ಪಾಲಿಗೆ ಹೆಚ್ಚಿನ ತೊಂದರೆಯುಂಟು ಮಾಡಿತು. ಖಾಸಗಿ ಬಸ್ಗಳು ಸಹ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡಿದ್ದರಿಂದ ಬೆಳಗಿನ ಜಾವದವರೆಗೂ ನಗರದಿಂದ ಹೊರಬರಲು ಸಾಧ್ಯವಾಗಲಿಲ್ಲ.




